ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾರಿಗೆ ಸಚಿವರೇ, ಇತ್ತ ಚಿತ್ತ ಹರಿಸಿ... ಬಸ್ ಕ್ಲೀನ್ ಹೆಸರಲ್ಲಿ ಲೂಟಿ?

ವಿಶೇಷ ವರದಿ: ಗಣೇಶ ಹೆಗಡೆ

ಬೆಂಗಳೂರು: ಬಿಎಂಟಿಸಿ ಬಸ್ ಸ್ವಚ್ಛತೆ ಹೆಸರಿನಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಹಾ ಲೂಟಿಗೆ ಇಳಿದಿದ್ದಾರೆಯೇ !?

ಹೀಗೊಂದು ಪ್ರಶ್ನೆಯನ್ನು 'ಪಬ್ಲಿಕ್ ನೆಕ್ಸ್ಟ್' ಎತ್ತುತ್ತಿದೆ. ನಮಗೆ ಸಿಕ್ಕಿರುವ ದಾಖಲೆಗಳ ಪ್ರಕಾರ ತಿಂಗಳಲ್ಲಿ 4 ಲಕ್ಷ ರೂ. ಬಸ್ ಗಳ ಸ್ವಚ್ಛತೆಗಾಗಿ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗುತ್ತಿದೆ.

ಆದರೆ, ಕ್ಲೀನಿಂಗ್ ಮಾತ್ರ ನೌಕರರೇ ಮಾಡಬೇಕು. ಈ ಚಿತ್ರಣ ಕೂಡಾ ಲಭ್ಯವಿದೆ. ಹಾಗಿದ್ರೆ ಗುತ್ತಿಗೆದಾರರು ಏನು ಮಾಡ್ತಾರೆ...?

ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ನಗರದಲ್ಲಿ ನಿತ್ಯ 5500 ಬಸ್ ಸಂಚಾರ ಮಾಡುತ್ತವೆ.‌

ಬಸ್ ಕ್ಲೀನ್‌ ಮಾಡಿದ ಗುತ್ತಿಗೆದಾರರ ಲಕ್ಷ ಲಕ್ಷ ಹಣವನ್ನು BMTC ಅಧಿಕಾರಿಗಳು ತಿಂಗಳು ಬಿಡುಗಡೆ ಮಾಡುತ್ತಿದ್ದಾರೆ. ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಪ್ರಶ್ನೆ ಎದ್ದಿದೆ. ಸಾರಿಗೆ ಸಚಿವರು ಇತ್ತ ಗಮನ ಹರಿಸಬೇಕೆಂಬ ಬಲವಾದ ಆಗ್ರಹ ಕೇಳಿ ಬಂದಿದೆ.

Edited By : Nagesh Gaonkar
Kshetra Samachara

Kshetra Samachara

27/11/2021 04:23 pm

Cinque Terre

302

Cinque Terre

0

ಸಂಬಂಧಿತ ಸುದ್ದಿ