ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬನಶಂಕರಿ ದೇವಸ್ಥಾನದ ಅಭಿವೃದ್ದಿಗೆ ಮಾಸ್ಟರ್‌ ಪ್ಲಾನ್‌ ರಚಿಸಲು ಸೂಚನೆ: ಸಚಿವೆ ಶಶಿಕಲಾ ಜೊಲ್ಲೆ..!

ಬೆಂಗಳೂರು: ದೈವ ಸಂಕಲ್ಪ ಯೋಜನೆಯ ಮೊದಲ ಹಂತದ ದೇವಾಲಯಗಳ ಪಟ್ಟಿಯಲ್ಲಿರುವ ಬೆಂಗಳೂರಿನ ಬನಶಂಕರಿ ದೇವಸ್ಥಾನದ ಸಮಗ್ರ ಅಭಿವೃದ್ದಿಗೆ ಮಾಸ್ಟರ್‌ ಪ್ಲಾನ್‌ ರಚಿಸಿತ್ತಿದ್ದಾರೆ. ಇಂದು ವಿಧಾನಸೌಧದಲ್ಲಿ ಆರ್ ಅಶೋಕ್ ಹತ್ತಿರಾ ಸಮಗ್ರವಾಗಿ ಚರ್ಚಿಸಿ ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಬೇಟಿ‌ ನೀಡಿದ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಚರ್ಚೆ ನಡೆಸಿದ್ದಾರೆ. ದೇವಸ್ಥಾನವನ್ನ ಸಂಪೂರ್ಣ ಪರೀಕ್ಷೆ ಮಾಡಿದ್ದಾರೆ.

ಬನಶಂಕರಿ ದೇವಸ್ಥಾನಕ್ಕೆ ಇಲಾಖೆಯ ಉನ್ನತ ಅಧಿಕಾರಿಗಳ ತಂಡದೊಂದಿಗೆ ಧೀಡೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಾನ್ಯ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

4.20 ಎಕರೆ ಪ್ರದೇಶದಲ್ಲಿರುವ ಬನಶಂಕರಿ ದೇವಸ್ಥಾನ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಈಗಾಗಲೇ ದೈವ ಸಂಕಲ್ಪ ಯೋಜನೆಯ ಮೊದಲ ಹಂತದ ದೇವಾಲಯಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಇಂದು ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಮಗ್ರವಾದ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ದೇವಾಲಯದಲ್ಲಿ 48 ಕೋಟಿ ರೂಪಾಯಿಗಳ ಹಣವಿದ್ದು, ಈ ಹಣದ ಸದುಪಯೋಗದ ಮೂಲಕ ಭಕ್ತಸ್ನೇಹಿ ಪರಿಸರವನ್ನ ನಿರ್ಮಾಣ ಮಾಡುವತ್ತ ಹೆಚ್ಚಿನ ಗಮನ ನೀಡುವಂತಹ ಮಾಸ್ಟರ್‌ ಪ್ಲಾನ್‌ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬನಶಂಕರಿದೇವಾಲಯ ಆವರಣದಲ್ಲಿರುವ ವರಪ್ರಸಾದ ಅಂಜನೇಯ ದೇವಾಲಯವು 1915ರಲ್ಲಿ ನಿರ್ಮಿಸಿದ್ದು, ಸುಮಾರು 100 ವರ್ಷಗಳಿಗೂ ಹಿಂದಿನ ದೇವಾಲಯವಾಗಿದ್ದು ತುಂಬಾ ಶಿಥೀಲಾವಸ್ಥೆಯಲ್ಲಿದೆ. ಇದರ ಜೀರ್ಣೋಧ್ದಾರಕ್ಕಾಗಿ ಮೂಲ ದೇವಾಲಯದ ಗರ್ಭಗುಡಿಯ ಹಿಂಬದಿ ಅಲಂಕಾರ ಮೂರ್ತಿಯಾಗಿ ಮತ್ತೊಂದು ಹೊಸ ಮೂರ್ತಿಯನ್ನು ಪ್ರತಿಸ್ಥಾಪಿಸಲು ಹಾಗೂ ಮೂಲ ದೇವಾಲಯದ ಗರ್ಭಗುಡಿ, ಪ್ರಾಂಗಣಗಳ ವಿಸ್ತೀರ್ಣವನ್ನು ವಿನ್ಯಾಸಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ನಕ್ಷೆಯನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಅನ್ನದಾಸೋಹ ಭವನದ ಮುಂಭಾಗ ಶಾಶ್ವತ ಛಾವಣಿ ನಿರ್ಮಾಣ, ಅನ್ನಪ್ರಸಾದ ವಿತರಣಾ ಕೌಂಟರ್‌ ಮತ್ತು ಆಸನಗಳ ನಿರ್ಮಾಣ

ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳ ಪ್ರಸಾದ ವಿತರಣೆಗೆ ಅನ್ನದಾಸೋಹ ಭವನವನ್ನು ಉಪಯೋಗಿಸಲಾಗುತ್ತಿದೆ.

Edited By : PublicNext Desk
Kshetra Samachara

Kshetra Samachara

22/08/2022 07:20 pm

Cinque Terre

786

Cinque Terre

0

ಸಂಬಂಧಿತ ಸುದ್ದಿ