ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BMTC ಪ್ರಯಾಣಿಕರಿಗೆ ಗುಡ್ ನ್ಯೂಸ್..!

ಬೆಂಗಳೂರು: ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಕರಿಗೆ ದಿನ ಹಾಗೂ ತಿಂಗಳಿನ ಪಾಸ್ ಅನ್ನು ನೀಡಲಾಗುತ್ತಿತ್ತು. ಈ ವ್ಯವಸ್ಥೆ ಅನೇಕ ಪ್ರಯಾಣಿಕರಿಗೆ ಅದೆಷ್ಟೋ ಅನುಕೂಲಕರವಾಗಿದೆ ಎಂದರೂ ತಪ್ಪಾಗಲಾರದು. ಅಲ್ಲದೇ ಕೆಲ ದಿನಗಳ ಹಿಂದೆಯಷ್ಟೇ ಇನ್ಮುಂದೆ ಪ್ರಯಾಣಿಕರಿಗೆ ಬಿಎಂಟಿಸಿ ಮೊಬೈಲ್ ಪಾಸ್ ಎಂಬ ಪರಿಕಲ್ಪನೆ ಪರಿಚಯಿಸಿತ್ತು. ಇದೀಗ ಮತ್ತೊಂದು ಹೊಸ ಹಾಗೂ ಪ್ರಯಾಣಿಕರಿಗೆ ಅನಕೂಲಕರವಾಗುವಂತಹ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

BMTC ಬಸ್ ಮಾಸಿಕ ಪಾಸ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡುವುದಾಗಿ ತಿಳಿದುಬಂದಿದೆ. ಈ ಹಿಂದೆ ಮಾಸಿಕ ಪಾಸ್ ಕ್ಯಾಲೆಂಡರ್ ಆಧಾರದಲ್ಲಿ ವಿತರಣೆ ಮಾಡಲಾಗ್ತಿತ್ತು. ಆದರೆ ಇದೀಗ ದಿನಾಂಕವಾರು ಮಾಸಿಕ ಪಾಸ್ ವಿತರಿಸಲು ಬಿಎಂಟಿಸಿ ಮುಂದಾಗಿದೆ. ಅಂದರೆ ಈ ಹಿಂದಿನ ನಿಯಮದ ಪ್ರಕಾರ ತಿಂಗಳ ಯಾವುದೇ ದಿನಾಂಕದಲ್ಲಿ ಪಾಸ್ ಕೊಂಡಿದ್ದರೂ ಪಾಸ್ ಅವಧಿ 30ಕ್ಕೆ ಮುಕ್ತಾಯವಾಗುತ್ತಿತ್ತು.

ಆದರೀಗ ಜಾರಿಯಾಗಲಿರುವ ಹೊಸ ನಿಯಮದ ಪ್ರಕಾರ ಯಾವ ದಿನಾಂಕದಂದು ಪಾಸ್ ಕೊಂಡರೂ ಮುಂದಿನ ತಿಂಗಳ ಅದೇ ದಿನಾಂಕದ ವರೆಗೂ ಪಾಸ್ ಚಾಲ್ತಿಯಲ್ಲಿರಲಿದೆ. ಅಲ್ಲದೇ ಈ ನಿಯಮವು ಬಿಎಂಟಿಸಿಯ ಸಾಮಾನ್ಯ ಸಾರಿಗೆ, ವಜ್ರ ಮತ್ತು ವಾಯುವಜ್ರ ಬಸ್ ಮಾಸಿಕ ಪಾಸ್​ ಗಳಿಗೆ ಅನ್ವಯವಾಗಲಿದೆ ಎಂದು ಬಿಎಂಟಿಸಿ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

25/05/2022 02:57 pm

Cinque Terre

1.18 K

Cinque Terre

0

ಸಂಬಂಧಿತ ಸುದ್ದಿ