ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಗ್ರಾಮ ಪಂಚಾಯ್ತಿ ವ್ಯಾಪ್ತಿ 13 ಹಳ್ಳಿಗಳಿಂದ ಕೆಐಡಿಬಿಗೆ 1,800 ಎಕರೆ ಕೃಷಿ ಭೂಮಿಯ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ನೂರಾರು ಜನ ರೈತರು ಅನಿರ್ದಿಷ್ಟಾವಧಿಗೆ ಧರಣಿ ನಡೆಸಿದ್ದಾರೆ.
ಚನ್ನಾರಾಯಪಟ್ಟಣ ನಾಡ ಕಚೇರಿ ಮುಂದೆ ನೂರಾರು ಜನ ರೈತರು ಧರಣಿ ನಡೆಸುತ್ತಿದ್ದು, ರೈತರ ಹೋರಾಟಕ್ಕೆ ರೈತ ನಾಯಕ ದಿವಂಗತ ಪ್ರೋಪೆಸರ್ ನಂಜುಂಡ ಸ್ವಾಮಿ ಪುತ್ರಿ ಚುಕ್ಕಿ ಸ್ವಾಮಿ ಆಗಮಿಸಿ ಬೆಂಬಲ ಸೂಚಿಸಿದರು. ರೈತ ಹೋರಾಟಗಾರ ನಾರಾಯಣಸ್ವಾಮಿ, ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ, ಕನ್ನಡ ರಕ್ಷಣ ವೇದಿಕೆ ಚಂದ್ರಶೇಖರ್, ದಲಿತ ಸಂಘರ್ಷ ಸಮಿತಿ ಮುಖಂಡ ಕಾರಳ್ಳಿ ಶ್ರೀನಿವಾಸ್, ಸೇರಿದಂತೆ ಹಲವು ಸಂಘಟನೆಗಳ ನೂರಾರು ಜನ ಕಾರ್ಯಕರ್ತರು ಧರಣಿಲಿ ಭಾಗಿಯಾಗಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ದೇವನಹಳ್ಳಿಯ JDS ಪಕ್ಷದ ಶಾಸಕ ನಿಸರ್ಗ ನಾರಾಯಣಸ್ವಾಮಿ ರೈತರ ಪರ ಬ್ಯಾಟ್ ಬೀಸಿ, ರೈತರಿಗೆ ಅನ್ಯಾಯವಾಗದ ರೀತಿ ಸರ್ಕಾರ ನಡೆದು ಕೊಳ್ಳಬೇಕು ಎಂದರು.
Kshetra Samachara
05/04/2022 07:30 am