ಬೆಂಗಳೂರು: ಬೆಂಗಳೂರು ಏ15 ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.ಚೈತ್ರಪೌರ್ಣಮಿಯ ದಿನವಾದ ಶನಿವಾರ ಮಧ್ಯರಾತ್ರಿಯಿಂದ ಆರಂಭಗೊಂಡು ಭಾನುವಾರ ಬೆಳಗಿನ ಜಾವದ ತನಕ ತಾಯಿ ದ್ರೌಪತಿದೇವಿಯ ಕರಗ ಬೆಂಗಳೂರು ಮಹಾನಗರದಾದ್ಯಂತ ಸಂಚರಿಸಲಿದೆ. ಕರಗದ ಕೇಂದ್ರ ಬಿಂದುವಾದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಆರಂಭಗೊಂಡು ಚಿಕ್ಕಪೇಟೆ,ಬಳೇಪೇಟೆ, ಕುಂಬಾರ ಪೇಟೆ,ಕಾಟನ್ ಪೇಟೆ, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್ ಅಣ್ಣಮ್ಮ ದೇವಸ್ಥಾನ ಸೇರಿದಂತೆ ಕೆಂಪೇಗೌಡ ಸ್ಥಾಪಿತ ಬೆಂಗಳೂರಿನ ಭಾಗಗಳಲ್ಲೆಲ್ಲಾ ಕರಗ ಸಂಚರಿಸಲಿದೆ.. ಇದೇ ಸಂದರ್ಭದಲ್ಲಿ ಕಾಟನ್ ಪೇಟೆಯಲ್ಲಿರುವ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿನೀಡಿ ಅಲ್ಲಿ ಪೂಜೆ ಪಡೆಯಲಿದೆ. ಬೆಂಗಳೂರು ಕರಗಕ್ಕೂ ಮಸ್ತಾನ್ ಸಾಬ್ ದರ್ಗಾ ಉಸ್ತುವಾರಿ ಸಮಿತಿಯವರು ಈಗಾಗಲೇ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿಕೊಟ್ಟು ಆಹ್ವಾನವನ್ನೂ ಕೊಟ್ಟುಬಂದಿದ್ದಾರೆ. ಸರಿಸುಮಾರು 300 ವರ್ಷಕ್ಕೂ ಅಧಿಕ ಇತಿಹಾಸವಿದೆ.. ಸೌಹಾರ್ದತೆಯ ಸಂಕೇತವಾಗಿ ಇದು ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಬೆಂಗಳೂರು ಕರಗದ ಸಂದರ್ಭದಲ್ಲಿ ತವಕ್ಕಲ್ ಮಸ್ತಾನ್ ಸಾಬ್ ದರ್ಗಾ ದ ಮುಜಾವರ್ ಮಹಮ್ಮದ್ ಗೌಸ್ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.
PublicNext
15/04/2022 04:32 pm