ಯಲಹಂಕ: ಕರ್ನಾಟಕದ ಬಳ್ಳಾರಿ & ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಸಕ್ರಿಯವಾಗಿರುವ ಶ್ರೀವಾಗ್ದೇವಿ ಸಂಗೀತ ಕಲಾ ನೃತ್ಯ ಸಂಸ್ಥೆ ದಕ್ಷಿಣ ಭಾರತ ರಾಜ್ಯಗಳ ಭರತನಾಟ್ಯ, ಕೂಚಪುಡಿ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಯಲಹಂಕದ ಚೌಡೇಶ್ವರಿ ದೇವಸ್ಥಾನ ಸಮೀಪದ ಕಲ್ಯಾಣಮಂಟಪದಲ್ಲಿ ದಕ್ಷಿಣ ಭಾರತದ ನೃತ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಶ್ರೀಚೌಡೇಶ್ವರಿ ದೇವಿಗೆ ಸಂಗೀತ ಸುಧೆ ನೃತ್ಯ ನೀರಾಜನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ BDA ಅಧ್ಯಕ್ಷ SR.ವಿಶ್ವನಾಥ್ ಚಾಲನೆ ನೀಡಿದರು. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಹಾಗೂ ತಮಿಳುನಾಡು ರಾಜ್ಯಗಳಿಂದ ಬಂದಿದ್ದ 5 ವರ್ಷದಿಂದ 25 ವರ್ಷ ವಯೋಮಾನದ ಬಾಲಕ, ಬಾಲಕಿ & ಯುವತಿಯರು ತಮ್ಮ ದೇಸೀಯ ಭರತನಾಟ್ಯ, ಕೂಚಪುಡಿ, ನೃತ್ಯ ಭರತನಾಟ್ಯ ಕಥಕ್ಕಳಿ ಪ್ರದರ್ಶಿಸಿದರು. ಇಂದು ಬೆಳಗ್ಗೆ 8ರಿಂದ ರಾತ್ರಿ 8 ರವರೆಗೆ ಸಾಂಸ್ಕೃತಿಕ ನೃತ್ಯ ಸತತ 12 ಗಂಟೆ ಕಾಲ ನಡೆಯಿತು.ಇದೇ ವೇಳೆ ಮಾತನಾಡಿದ ಗಣ್ಯರು ಈ ರೀತಿ ಕಾರ್ಯಕ್ರಮ ಚನ್ನಾಗಿ ನಡೆಯಲು ಪ್ರೊತ್ಸಾಹ ನೀಡಬೇಕು ಎಂದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
Kshetra Samachara
07/07/2022 08:00 am