ಆನೇಕಲ್ :ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿ ಮಾನಸಿಕವಾಗಿ ಗಟ್ಟಿಗೊಂಡು ಅನೇಕ ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೆನರಾ ಬ್ಯಾಂಕಿನ ವ್ಯವಸ್ಥಾಪಕರಾದ ಮಂಜುನಾಥ್ ನಾಯಕ್ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಬ್ಯಾಂಕಿನಲ್ಲಿ ಪುಸ್ತಕ ಓದು ಕನ್ನಡಿಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬ್ಯಾಂಕಿನ ವ್ಯವಸ್ಥಾಪಕರಾದ ಮಂಜುನಾಥ್ ನಾಯಕ್ ನೆರವೇರಿಸಿದರು ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಿ ವಿ ಎಸ್ ಎಸ್ ಎಂ ಮಾಜಿ ಅಧ್ಯಕ್ಷ ಮಂಜುನಾಥ್ ಟಿ ನಾಗರಾಜು ಇದ್ದರು.
ಬ್ಯಾಂಕಿನ ವ್ಯವಸ್ಥಾಪಕರಾದ ಮಂಜುನಾಥ್ ನಾಯಕ್ ಮಾತನಾಡಿ ನಾಡಿನ ಉದ್ದಗಲಕ್ಕೂ ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗಬೇಕು ಕಲುಷಿತಗೊಂಡ ಸಮಾಜ ಸರಿದಾರಿಗೆ ತರಲು ಸಹಕಾರಿಯಾಗುತ್ತದೆ ನಮ್ಮ ಶಾಖೆಯಲ್ಲೂ ಕನ್ನಡದ ವಾತಾವರಣವನ್ನು ನಿರ್ಮಾಣ ಮಾಡಿ ಕನ್ನಡವನ್ನು ಬೆಳೆಸಲು ಎಲ್ಲ ರೀತಿಯಾದ ಪ್ರಯತ್ನವನ್ನು ನಮ್ಮ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ ಅನೇಕ ದಾರ್ಶನಿಕರು ಸಾಧುಸಂತರು ಮಹಾಪುರುಷರ ವಿಚಾರಗಳನ್ನು ಪುಸ್ತಕ ಓದುವುದರಿಂದ ತಿಳಿದುಕೊಳ್ಳಬಹುದಾಗಿದೆ ನಿರಂತರ ಓದಿನಿಂದ ಮೂರ್ತ ಅಮೂರ್ತ ವಿಚಾರಗಳನ್ನು ಕುಳಿತಲ್ಲಿಯೇ ತಿಳಿದುಕೊಂಡು ನಾವಿರುವ ಪ್ರದೇಶವನ್ನು ಸ್ವರ್ಗ ಮಾಡಿಕೊಳ್ಳಬಹುದು ಎಂದು ಹೇಳಿದರು ಪುಸ್ತಕಗಳು ಪ್ರಪಂಚದಲ್ಲಿರುವ ಉತ್ತಮ ಸ್ನೇಹಿತರು ಯಾರೇ ಕೈಬಿಟ್ಟರು ಪುಸ್ತಕಗಳು ಹಾಗೂ ಅದರಲ್ಲಿರುವ ವಿಚಾರಗಳು ಎಂದಿಗೂ ನಮ್ಮನ್ನು ಬಿಡುವುದಿಲ್ಲ ಎಂದು ತಿಳಿಸಿದರು.
Kshetra Samachara
26/05/2022 08:01 pm