ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶುಲ್ಕ ಕಟ್ಟದ ಮಕ್ಕಳ ಮೇಲೆ ಅಮಾನವೀಯತೆ; ಪೋಷಕರು ಗರಂ, ಧರಣಿ

ಬೆಂಗಳೂರು: ಶಾಲಾ ಶುಲ್ಕ ಕಟ್ಟದ ಮಕ್ಕಳ ಮೇಲೆ ಆಡಳಿತ ಮಂಡಳಿ ಅಮಾನವೀಯವಾಗಿ ನಡೆದು ಕೊಂಡಿದ್ದಾರೆಂದು ಆರೋಪಿಸಿ ಪೋಷಕರು ಧರಣಿ ನಡೆಸಿದ ಘಟ‌ನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಕಮಲಾನಗರದ ಖಾಸಗಿ ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ನಿನ್ನೆ ಜಟಾಪಟಿ ನಡೆದಿದೆ.

ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಮಕ್ಕಳ ಫೀಸ್ ಕಟ್ಟಲು ಸಾಧ್ಯವಾಗಿಲ್ಲ. ಇದ್ಕೆ ಕಾಲಾವಕಾಶ ಬೇಕು ಎಂಬುದು ಪೋಷಕರ ಆಗ್ರಹ.

ಆದರೆ ಶುಲ್ಕ ಪಾವತಿಸದೇ ಶಾಲೆ ನಡೆಸೋದು ಹೇಗೆ ..? ಹೀಗಾಗಿ ಶುಲ್ಕ ಪಾವತಿಸಿ ಇಲ್ಲ ಟಿ‌.ಸಿ. ಪಡೆದು ಕೊಂಡು ಹೋಗಿ ಎಂಬುದು ಖಾಸಗಿ ಶಾಲಾ ಆಡಳಿತ ಮಂಡಳಿ ಯ ವಾದವಾಗಿದೆ.

ಈ ಬಗ್ಗೆ ವಾದ- ವಿವಾದ ನಡೆದಿದ್ದು ಬಳಿಕ ಫೀಸ್ ಕಟ್ಟಲು ಪೋಷಕರು ಒಪ್ಪಿದ್ದಾರೆ ಎನ್ನಲಾಗಿದೆ.

Edited By : Manjunath H D
Kshetra Samachara

Kshetra Samachara

22/12/2021 01:36 pm

Cinque Terre

676

Cinque Terre

0

ಸಂಬಂಧಿತ ಸುದ್ದಿ