ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು 2017 - 2018ರಲ್ಲಿ ನಡೆಸಿದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಕರೆದಿತ್ತು. ಈ ಪರೀಕ್ಷೆಯಲ್ಲಿ ಇಂಡಿಯಾ 4 ಐಎಎಸ್ ಅಕಾಡಮಿ ವತಿಯಿಂದ ಸುಮಾರು 106 ವಿದ್ಯಾರ್ಥಿಗಳು ತರಬೇತಿ ಪಡೆದು ಪರೀಕ್ಷೆ ಬರೆದು 64 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಸೆಪ್ಟೆಂಬರ್ 5ನೇ ತಾರೀಖು ಈ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಅಕಾಡೆಮಿಯಿಂದ ಈ ಬಾರಿ 64 ವಿದ್ಯಾರ್ಥಿಗಳು ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 106 ಪೋಸ್ಟ್‌ಗಳಲ್ಲಿ 64 ಜನ ತೇರ್ಗಡೆ ಹೊಂದಿದ್ದಾರೆ.
ಇನ್ನು ಇವರಲ್ಲಿ ಹಲವರು ಅಸಿಸ್ಟಂಟ್ ಕಮಿಷನರ್, ತಹಶೀಲ್ದಾರ್ ಮತ್ತು ಸಹಕಾರ ಇಲಾಖೆಗೆ ಆಯ್ಕೆಯಾಗಿದ್ದಾರೆ. ಇಂಥ ಒಳ್ಳೆಯ ಅಕಾಡಮಿಯಿಂದ ಇವರು ಪಾಸಾಗಿ ತಮ್ಮ ಜೀವನ ಪ್ರಾರಂಭ ಮಾಡುತ್ತಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಇವರು ಐಎಎಸ್ ಪರೀಕ್ಷೆ ಬರೆದು ಜಿಲ್ಲಾಧಿಕಾರಿಗಳಾಗಿ ಹೊರಬರಲಿ ಎಂದು ನಿವೃತ್ತ ಐಎಫ್‌ಎಸ್ ಅಧಿಕಾರಿ ಶ್ರೀ ಕಂಠಯ್ಯ ಪರಾಗ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Kshetra Samachara
08/09/2022 01:18 pm