ವರದಿ: ಗೀತಾಂಜಲಿ
ಬೆಂಗಳೂರು: ನಗರದ ವಿವಿಧ ಖಾಸಗಿ ಶಾಲೆಗಳಲ್ಲಿ ಪುಸ್ತಕ ಮತ್ತು ಸಮವಸ್ತ್ರಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಸಿಬ್ಬಂದಿ ನಮಗೆ ಎಷ್ಟೆಲ್ಲಾ ಪುಸ್ತಕಗಳು ಮತ್ತು ಸಮವಸ್ತ್ರ ಬೇಕು ಎಂಬ ಮಾಹಿತಿ ಕೊಟ್ಟರೆ ಸಾಕು. ನಾವು ಹೊರಗೆ ಪುಸ್ತಕ ಖರೀದಿಸುತ್ತೇವೆ. ಸಮವಸ್ತ್ರವನ್ನೂ ಹೊಲಿಸುತ್ತೇವೆ. ಆದರೆ ಶಾಲೆಗಳು ತಮ್ಮಿಂದಲೇ ಖರೀದಿಸಬೇಕು ಎಂದು ತಾಕೀತು ಮಾಡುತ್ತಿವೆ.
ಮಾರುಕಟ್ಟೆಯಲ್ಲಿ ಎಂಆರ್‌ಪಿಗಿಂತಲೂ ಕಡಿಮೆ ಬೆಲೆಗೆ ಸಿಗುವ ಪುಸ್ತಕಗಳನ್ನು ದುಬಾರಿ ಬೆಲೆಗೆ ಮಾರಲಾಗುತ್ತಿದೆ ಎಂದು ಹಲವು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲೆಗಳ ವಿರುದ್ಧ ಪೋಷಕರು ಕಿಡಿ ಕಾರುತ್ತಿದ್ದಾರೆ.
PublicNext
15/07/2022 12:00 pm