ಆನೇಕಲ್: ಈಗಿನ ಕಾಲದಲ್ಲಿ ಸರ್ಕಾರಿ ಶಾಲೆ ಅಂದ್ರೆ ಸಾಕು, ಮೂಗು ಮುರಿಯುವ ಜನರೇ ಹೆಚ್ಚು. ಆದರೆ, ಇಲ್ಲಿನ ಸರ್ಕಾರಿ ಶಾಲೆ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆಯೇನಿಲ್ಲ ಅಂತ ಇಲ್ಲೊಬ್ಬರು ಸಣ್ಣ ಉದ್ಯಮಿ ತೋರಿಸಿಕೊಟ್ಟಿದ್ದಾರೆ!
ಒಂದು ಕಡೆ ರೌಂಡ್ ಟೇಬಲ್ ಗಳು, ಚೆಯರ್ ಗಳು. ಮತ್ತೊಂದು ಕಡೆ ಹೊಸ ಹೊಸ ಪೀಠೋಪಕರಣ... ಈ ದೃಶ್ಯಾವಳಿ ಕಂಡುಬಂದಿದ್ದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮುತ್ತಗಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ.
ಈ ಶಾಲೆಯಲ್ಲಿ ಮಕ್ಕಳು ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೆ ಸೌಕರ್ಯಗಳಿಲ್ಲದೆ ವಂಚಿತರಾಗಿದ್ದರು. ಹೀಗಾಗಿ ಸಣ್ಣ ಕೈಗಾರಿಕೆ ಉದ್ಯಮಿ ನರಸಿಂಹನ್ ಎಂಬವರು ಸ್ವಂತ ಹಣದಲ್ಲಿಯೇ ಶಾಲೆಗೆ ಬೇಕಾದ ಚೆಯರ್ ಸಹಿತ ಇತರ ಕಲಿಕಾ ಸಲಕರಣೆಗಳನ್ನು ಉಚಿತವಾಗಿ ನೀಡಿ ಸಹೃದಯತೆ ಮೆರೆದಿದ್ದಾರೆ. ಊರಿನ ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯ ಅಪ್ಪಣಚಾರಿ ಅವರು ನರಸಿಂಹನ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
PublicNext
23/02/2022 05:01 pm