ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಲ್ಲಿ ಇದೇ ಮೊದಲ ಬಾರಿಗೆ ಆಟಿಕೆಗಳ ಗುರುಪೂರ್ಣಿಮೆ ಆಚರಣೆ

ಬೆಂಗಳೂರು: ಪ್ರತಿವರ್ಷವೂ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸುವ ಜೆಪಿ ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಈ ಬಾರಿ 1 ಲಕ್ಷ ಆಟದ ಸಾಮಗ್ರಿಗಳನ್ನು ಬಳಸಿ ಮಾಡಿದ್ದ ವಿಶೇಷ ಅಲಂಕಾರ ಎಲ್ಲರನ್ನೂ ಆಕರ್ಷಿಸುತ್ತಿದೆ.

ಗೋಲಿ, ಬುಗರಿ, ಗಿಲ್ಲಿದಾಂಡು, ಕ್ಯಾಟರ್‌ ಪಿಲ್ಲರ್‌ ನಂತಹ ಸಾಂಪ್ರದಾಯಿಕ ಆಟದ ಸಾಮಗ್ರಿಗಳು, ಅಲ್ಲದೇ, ಕ್ರಿಕೆಟ್‌, ಟೆನ್ನಿಸ್‌, ಹಾಕಿ ಬ್ಯಾಟುಗಳು ಸೇರಿದಂತೆ ಹಲವಾರು ವಿಧಧ ಕ್ರೀಡಾ ಸಾಮಗ್ರಿಗಳನ್ನು ಇಲ್ಲಿ ಬಳಸಲಾಗಿತ್ತು. ಗುರುಪೂರ್ಣಿಮೆ ಮುಗಿದ ನಂತರ ಈ ಸಾಮಗ್ರಿಗಳನ್ನು ಅಗತ್ಯವಿರುವವರಿಗೆ ಉಚಿತವಾಗಿ ನೀಡಲಾಗುತ್ತದೆ.

ಜುಲೈ 13 ರಿಂದ ಒಂದು ವಾರಗಳ ಕಾಲ ಈ ವಿಶೇಷ ಅಲಂಕಾರವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದಾಗಿದೆ.

Edited By : Nirmala Aralikatti
Kshetra Samachara

Kshetra Samachara

13/07/2022 07:36 pm

Cinque Terre

808

Cinque Terre

0

ಸಂಬಂಧಿತ ಸುದ್ದಿ