ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಯನಗರದಲ್ಲಿ ಬಸವಣ್ಣ ಪುತ್ಥಳಿ ಉದ್ಘಾಟನೆ

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಶಾಕಾಂಬರಿನಗರ ವಾರ್ಡ್‌ನಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮ ಮಾಡಲಾಯಿತು. ಡಾ. ಪುನೀತ್ ರಾಜಕುಮಾರ್ ರಸ್ತೆಯ ಸಂಗಮ್ ಸರ್ಕಲ್‌ನಲ್ಲಿ ಬಸವಣ್ಣನವರ ಪುತ್ಥಳಿ ಇಡಲಾಗಿದೆ. ಬಸವಣ್ಣನವರ ಪುತ್ಥಳಿ ಉದ್ಘಾಟನೆ ಮಾಡಿದ ಸಿದ್ಧಗಂಗಾ ಮಠದ ಪೂಜ್ಯ ಸಿದ್ಧಗಂಗಾ ಶ್ರೀಗಳು ಮತ್ತು ಸುತ್ತೂರು ಮಠದ ಶ್ರೀಗಳಿಂದ ಉದ್ಘಾಟನೆ ಮಾಡಲಾಯಿತು.

ಶ್ರೀಗಳ ಜೊತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆದ ರಾಮಲಿಂಗಾರೆಡ್ಡಿ ಮತ್ತು ಎಂ.ಬಿ ಪಾಟೀಲ್ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಾಜಿ ಮಹಾಪೌರ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರನ್ನು ಅಭಿನಂದಿಸಲಾಯಿತು. ಗಂಗಾಂಬಿಕೆ ಅವರು ಮಹಾಪೌರರಾಗಿದ್ದಾಗ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಸವಣ್ಣನವರ ಪುತ್ಥಳಿ ಇಲ್ಲದಿರುವ ಕಾರಣ ಶಾಕಾಂಬರಿ ನಗರದ ಜನರ ಕೋರಿಕೆಯಂತೆ ವಾರ್ಡ್‌ನಲ್ಲಿ ಬಸವಣ್ಣನವರ ಪುತ್ಥಳಿಗಾಗಿಯೇ ಒಂದು ಕೋಟಿ ರೂ. ಮೀಸಲಿಡಲಾಗಿತ್ತು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಲೇಸರ್ ಶೋ ಕೂಡ ನಡೆಸಲಾಯಿತು. ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಮಹಾಪೌರರಾದ ಗಂಗಾಂಬಿಕೆ ಮಲ್ಲಿಕಾರ್ಜುನ್, ಮಾಜಿ ಕಾರ್ಪೊರೇಟರ್ ನಟರಾಜ್ ಮತ್ತು ಶಾಕಾಂಬರಿ ವಾರ್ಡ್‌ನ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Edited By : Nagesh Gaonkar
Kshetra Samachara

Kshetra Samachara

11/07/2022 02:36 pm

Cinque Terre

3.16 K

Cinque Terre

0