ಬೆಂಗಳೂರು: ಹೋಳಿ-ಹೋಳಿ, ಹೋಳಿ-ಹೋಳಿ ಹೇಳೇಳು ಬಣ್ಣದ ಬೆಳ್ಳಿ ಹೋಳಿ, ರಾಗ ರಂಗಿನಾ ರಂಗು-ರಂಗೋಲಿ, ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ, ವಾ ಎಂತ ಸಾಲುಗಳು, ಕೇಳ್ತಿದ್ರೆ ಕೇಳ್ತಾನೆ ಇರೋಣ ಅನ್ನಿಸುತ್ತೆ, ಯಾವ್ದೆ, ಭೇದಭಾವ ವಿಲ್ಲದೆ ಎಲ್ರು ಸಹ ಹೋಳಿ ಹಾಡ್ತಾ ಎಂಜಾಯ್ ಮಾಡ್ತಾ ಇದ್ದಾರೆ..
ಇವತ್ತು, ಎಲ್ಲೆಲ್ಲು ಬಣ್ಣಗಳದ್ದೆ ಕಲರವ.. ಯಾರು ಜಾತಿ,ಮತವಿಲ್ಲದೆ ಬಣ್ಣ ಹಾಕಿಕೊಂಡು ಕುಣಿದು ಕುಪ್ಪಳಿಸುತಿದ್ದಾರೆ.. ಮಕ್ಕಳ ಕೈ ನಲ್ಲಿ ಈ ಬಣ್ಣಗಳನ್ನ ನೋಡ್ತಿದ್ರೆ ಮನಸ್ಸಿಗೆ ಬಹಳ ಖುಷಿ ಕೊಡುತ್ತೆ..
ಇನ್ನೂ ಸ್ನೇಹದಲ್ಲಿ ಏನೇ ಬೇಜಾರಿದ್ರು, ಸಂಬಂಧದಲ್ಲಿ ಬಿರುಕಿದ್ರು, ಬಾಂಧವ್ಯ ಬೆಸೆಯೋ ಹಬ್ಬ ಈ ಹೋಳಿ ಹಬ್ಬ ಅಂತಾನೆ ಹೇಳಬಹುದು.. ಇನ್ನೂ ಯಾರಾದ್ರು ಹೋಳಿ ಆಡ್ತಿದ್ರೆ ಆಡೊಳ್ಳಿ ಬಿಡು, ನಾವೇನ್ ಮಕ್ಕಳ ಆಡೋಕೆ ಅಂದುಕೊಂಡ್ರು ಕೂಡ ಮನಸ್ಸು ಕೇಳೋದಿಲ್ಲ, ವಯಸ್ಸಿನ ಅಂತರವಿಲ್ಲದೆ ಹಾಡಿ, ಎಂಜಾಯ್ ಮಾಡೋದೆ ಈ ಹೋಳಿ ಹಬ್ಬದ ವಿಶೇಷತೆ.
ಮಕ್ಕಳು, ದೊಡ್ಡವರು ಅನ್ನೋ ಅಹಂ ಇಲ್ಲದೆ ಹೋಳಿ ಹಾಡಿ ಮಜಾ ಮಾಡ್ತಿರುವ ಹುಡುಗರು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಮಕ್ಕಳು ಹೋಳಿ ಆಡ್ತಾ, ಸಾಂಗ್ ಹಾಕಿಕೊಂಡು ಡ್ಯಾನ್ಸ್ ಮಾಡ್ತಿರುವ ದೃಶ್ಯಗಳು ಮತ್ತೊಂದು ಕಡೆ.. ಇವೆಲ್ಲ ನೋಡ್ತಿದ್ರೆ, ಇರುವ ಸ್ಟ್ರೆಸ್ ಎಲ್ಲವೂ ದೂರ ಆಗುತ್ತೆ. ನಮ್ಮ ಬಾಲ್ಯ ನೆನಪಾಗುತ್ತೆ. ಎಲ್ಲರೂ ಹೋಳಿ ಆಡಿ ಎಂಜಾಯ್ ಮಾಡಿ ಅಂತ ಹೇಳ್ತಾ.
ರಂಜಿತ ಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
Kshetra Samachara
18/03/2022 07:38 pm