ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ದ ಕ್ಷೇತ್ರ ಮಧುರೆ ಕನಸವಾಡಿಯಲ್ಲಿ ಶ್ರೀ ಶನಿ ಮಹಾತ್ಮ ಸ್ವಾಮಿಯ 67ನೇ ಬ್ರಹ್ಮರಥೋತ್ಸವ ನಡೆಯಿತು. ಶನಿ ಮಹಾತ್ಮ ಹಾಗೂ ಜೇಷ್ಠಾದೇವಿ ದೇವಾಲಯಗಳಿರುವ ಕನಸವಾಡಿ ಕ್ಷೇತ್ರ ರಾಜ್ಯದಲ್ಲಿಯೇ ಹೆಸರುವಾಸಿ.
ಬ್ರಹ್ಮ ರಥೋತ್ಸವ ಅಂಗವಾಗಿ, ಶನಿ ಮಹಾತ್ಮ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಯಾಗ, ವಿಶೇಷ ಪೂಜೆ ಜರುಗಿತು. ಒಂದು ವಾರ ನಡೆಯಲಿರುವ ಬ್ರಹ್ಮ ರಥೋತ್ಸವದ ವಿಶೇಷ ಕಾರ್ಯಕ್ರಮಗಳಲ್ಲಿ ನಾನಾ ಉತ್ಸವ, ನಾಟಕೋತ್ಸವ ನಡೆಯಲಿವೆ.
* ಪಾನಕ, ಕೋಸಂಬರಿ ವಿತರಣೆ: ಭಕ್ತಾದಿಗಳಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಎತ್ತಿನ ಗಾಡಿಗಳಲ್ಲಿ ಪಾನಕ, ಕೋಸಂಬರಿಯನ್ನು ಹಂಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೊಡ್ಡಬಳ್ಳಾಪುರ ಸಹಿತ ಬೆಂಗಳೂರು, ನೆಲಮಂಗಲ ಹಾಗೂ ರಾಜ್ಯದ ವಿವಿಧಡೆಗಳಿಂದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ದೇವರಿಗೆ ಸೇವೆ ಸಮರ್ಪಿಸಿ ಧನ್ಯತೆ ಮೆರೆದರು.
Kshetra Samachara
12/03/2022 09:00 pm