ಆನೇಕಲ್ : ಮಹಾಯೋಗಿ ವೇಮನರ ಆದರ್ಶಗಳನ್ನ ಎಲ್ಲರೂ ಪರಿ ಪಾಲಿಸೋಣ, ಅವರ ಮಾರ್ಗದರ್ಶನದಲ್ಲಿ ನಡೆಯೋಣ ಆಗಲೇ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕರು ಬಿ ಶಿವಣ್ಣ ತಿಳಿಸಿದರು.
ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ 610 ನೇ ಮಹಾಯೋಗಿ ವೇಮನ ಜಯಂತಿಯನ್ನು ಭಾಗಿಯಾಗಿ ಮಾತನಾಡಿದ ಸಮಾಜವನ್ನು ಕಟ್ಟುವುದಕ್ಕೆ ಎಲ್ಲಾ ಸಮುದಾಯದ ಅವಶ್ಯಕತೆಯಿದೆ ಸಮ ಸಮಾಜವನ್ನ ನಿರ್ಮಾಣ ಮಾಡಲಿಕ್ಕೆ ಸಾಕಷ್ಟು ಬಲಿದಾನಗಳನ್ನು ನಡೆದಿವೆ ಅದರಲ್ಲಿ ವೇಮನ ಒಬ್ಬರು ಅವರ ಆದರ್ಶಗಳನ್ನು ನಾವು ಬಳಸಿಕೊಳ್ಳಬೇಕು ಎಂದು ಶಾಸಕ ಸಂದೇಶವನ್ನು ಜನರಿಗೆ ತಿಳಿಸಿದರು
ಮಹಾಯೋಗಿ ವೇಮನ ಜಯಂತಿ ತೆರೆದ ವಾಹನದಲ್ಲಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಲಾಯಿತು ಇನ್ನು ಕೋವಿಡ್ ಕಾರಣದಿಂದಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿ ಸರಳವಾಗಿ ಆಚರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ರೆಡ್ಡಿ ಜನ ಸಂಘದ ಕಾರ್ಯಕರ್ತರು ಮುಖಂಡರುಗಳು ಭಾಗಿಯಾಗಿದ್ದರು
Kshetra Samachara
27/01/2022 05:22 pm