ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇಶ ಕಂಡ ಶ್ರೇಷ್ಠ ಸಾಮ್ರಾಟ ಶ್ರೀಕೃಷ್ಣದೇವರಾಯನಿಗೆ ಜನರಿಂದ ಜೈಕಾರ

ಯಲಹಂಕ: ಕನ್ನಡನಾಡಿನ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಿದ ಕೃಷ್ಣದೇವರಾಯರ ಹುಟ್ಟು ಹಬ್ಬವನ್ನು ನಿನ್ನೆ ಸೋಮವಾರ ಯಲಹಂಕದಲ್ಲಿ ಆಚರಿಸಲಾಯಿತು. ಯಲಹಂಕದ ಸಂಭ್ರಮ ಕಾಲೇಜು ಸಮೀಪದ ವಿಶ್ವನಗರದ ಆಂಜನೇಯ ದೇವಸ್ಥಾನ ಬಳಿ ಕೃಷ್ಣದೇವರಾಯರಿಗೆ ಪುಷ್ಪಾರ್ಚನೆ ಮಾಡಲಾಯಿತು. ವಿಶ್ವನಗರದ ಹತ್ತಾರು ಜನ ಆಂಜನೇಯ ದೇವರಿಗೆ ನಮಿಸಿ ಕೃಷ್ಣದೇವರಾಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಹುಟ್ಟುಹಬ್ಬವನ್ನು ಆಚರಿಸಿದರು.

ಇತ್ತೀಚಿನ ಆಧುನಿಕ ಯುಗದಲ್ಲಿ ಬಾಲಿವುಡ್‌ನಟರು, ಚಲನಚಿತ್ರ ನಟರು, ಕ್ರಿಕೆಟಿಗರು ಭಾರತದ ನವ ಸಮಾಜಕ್ಕೆ ಮಾದರಿಯಾಗುತ್ತಿದ್ದಾರೆ. ಚಿನ್ನ ಬೆಳ್ಳಿ ಆಭರಣಗಳನ್ನು ಸಂತೆ ಬೀದಿಗಳಲ್ಲಿ ತರಕಾರಿ ಮಾರುವಂತೆ ಮಾರುತ್ತಿದ್ದ ಕಾಲವದು. ದಶಕಗಳ ಕೃಷ್ಣದೇವರಾಯನ ಆಡಳಿತಾವದಿಯಲ್ಲಿ ವಿಜಯನಗರ ಸಾಮ್ಯಾಜ್ಯದ ಕೀರ್ತಿ ವಿಶ್ವದೆಲ್ಲೆಡೆ ಹಬ್ಬಿತ್ತು. ದೇಶ ವಿದೇಶಗಳ ಗಣ್ಯಾತಿಗಣ್ಯರು ಜೀವನದಲ್ಲೊಮ್ಮೆ ವಿಜಯನಗರದ ರಾಜಧಾನಿ ಹಂಪಿಯ ಸೊಬಗನ್ನು ಕಣ್ತುಂಬಿಕೊಳ್ಳುವ ಕನಸು ಕಾಟುತ್ತಿದ್ದರು. ಇಂತಹ ಮಾನ್ ಸಾಮ್ಯಾಜ್ಯದ ಶ್ರೇಷ್ಠರಾಜ‌ ಕೃಷ್ಣದೇವರಾಯ ನಮ್ಮ ನವಸಮಾಜಕ್ಕೆ ಸ್ಪೂರ್ತಿಯಾಗಲಿ ಎಂಬುದು ಇತಿಹಾಸ ಪ್ರೇಮಿಗಳ ಆಶಯ.

Edited By : Manjunath H D
Kshetra Samachara

Kshetra Samachara

18/01/2022 10:16 am

Cinque Terre

896

Cinque Terre

0