ದೇವನಹಳ್ಳಿ: ಕೊರೊನಾತಂಕ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ರಾಂತಿ ಹಬ್ಬ ಸಂಭ್ರಮ ಜೋರಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿಯ ಐಬಸಾಪುರ ಗ್ರಾಮದಲ್ಲಿ ವಾಡಿಕೆಯಂತೆ 11 ಜೋಡಿ ಎತ್ತುಗಳ ಮೆರವಣಿಗೆ ನಡೆಯಿತು.
ನೂರಾರು ಮನೆಗಳಲ್ಲಿ ಮೊದಲು ಜೋಡೆತ್ತುಗಳಿಂದಲೇ ಕೃಷಿ ತೋಟದ ಕೆಲಸ ಮಾಡಲಾಗ್ತಿತ್ತು. ಆದರೀಗ ಆಧುನಿಕ ಕೃಷಿ ಪದ್ಧತಿಗೆ ಹೊಂದಿಕೊಂಡ ಕೃಷಿಗೆ ಮಹತ್ವ ಜಾಸ್ತಿಯಾಗಿದೆ. ಆದರೂ ಕೃಷಿ ಪ್ರಧಾನ ಭಾರತದ ಗ್ರಾಮೀಣ ಭಾಗದಲ್ಲಿ ಎತ್ತುಗಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆಯಿದೆ.
ಇಂದು ಬೆಳಗ್ಗೆಯಿಂದಲೇ ಎತ್ತುಗಳನ್ನು ತೊಳೆದು, ಕೊಂಬು ಶುಭ್ರಗೊಳಿಸಿ, ಬಣ್ಣ ಬಳಿದು ನವ ವಧುವಿನಂತೆ ಸಿಂಗರಿಸಿ ಪ್ರತಿ ಮನೆಯವರು ಎತ್ತುಗಳನ್ನು ಮಕ್ಕಳಿಗಿಂತ ಹೆಚ್ಚು ಮುದ್ದು ಮಾಡುತ್ತಾರೆ.
ಸೂರ್ಯಾಸ್ತ ವೇಳೆ ಊರ ಹೊರಬಾಗಿಲ ಬಳಿ ಎತ್ತುಗಳಿಂದ ಬೆಂಕಿ ಹಾಯಿಸುತ್ತಾರೆ. ಇದಕ್ಕೂ ಮೊದಲು ಎಲ್ಲಾ ಜೋಡೆತ್ತುಗಳನ್ನು ಒಡ್ಡೋಲಗ ಜೊತೆ ಮೆರವಣಿಗೆ ಮಾಡಿ, ದೇವಸ್ಥಾನ ತಲುಪುತ್ತಾರೆ. ಅಲ್ಲಿ ಪೂಜೆ ನಂತರ ಬೆಂಕಿ ಹಾಯಿಸಿ, ಎತ್ತು ಓಡಿಸುತ್ತಾರೆ.
"ಹಿಂದಿನ ಕಾಲದಿಂದಲೂ ಈ ಸಂಪ್ರದಾಯ ಮುಂದುವರಿಯುತ್ತಾ ಬಂದಿದ್ದು, ಮುಂದೆಯೂ ಇರುತ್ತದೆ. ನಾವು ಎತ್ತುಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡ್ತೇವೆ" ಅಂತಾರೆ ಐಬಸಾಪುರ ರೈತರು.
Kshetra Samachara
15/01/2022 09:58 pm