ಬೆಂಗಳೂರು: ಇಂದು ಗುರುಪೂರ್ಣಿಮೆ ಹಿನ್ನಲೆಯಲ್ಲಿ ನಗರದ ಎಲ್ಲಾ ಬಾಬಾ ಮಂದಿರಗಳಲ್ಲಿ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು. ಬಿಟಿಎಂ ಲೇಔಟ್‌ನಲ್ಲಿರುವ ಮೈಕೋಲೇಔಟ್ ಸಾಯಿಬಾಬಾ ಮಂದಿರದಲ್ಲಿ ವಿಶೇಷವಾಗಿ ದ್ವಾರಕಾಮಯಿ ಶಿರಡಿಯ ರೀತಿ ವಿಶೇಷ ಅಲಂಕಾರ ಮಾಡಿ ಶಿರಡಿ ಸಾಯಿಬಾಬಾನಿಗೆ ಪೂಜೆ ಸಲ್ಲಿಸಲಾಯಿತು. ಯಾವ ರೀತಿ ಶಿರಡಿ ಸಾಯಿಬಾಬಾ ದ್ವಾರಕಾದಲ್ಲಿ ಅವರ ಜೀವನ ನಡೆಸಿದರು ಅದೇ ರೀತಿಯ ಸೆಟ್ ನಿರ್ಮಿಸಲಾಯಿತು.
ಮೈಕೋಲೇಔಟ್ ಸಾಯಿಬಾಬಾ ದೇವಸ್ಥಾನದಲ್ಲಿ ಒಂದು ವಿಶೇಷ ಘಟನೆ ಕೂಡ ನಡೆಯಿತು. ಶ್ವಾನ ಒಂದು ದೇವಸ್ಥಾನದ ಒಳಗೆ ಬಂದು ಸಾಯಿಬಾಬಾ ಪಾದದ ಬಳಿಬಂದು ಇಡೀ ದಿನ ಕುಳಿತು ಸಾಯಿಬಾಬಾ ಸ್ಮರಣೆ ಮಾಡುತ್ತಿತ್ತು. ನಾಯಿಗಳು ದತ್ತಾತ್ರೇಯನ ಅವತಾರ ಎನ್ನಲಾಗುವುದು. ನಾಲ್ಕು ವೇದಗಳು ನಾಯಿಯಾಗಿ ಯಾವಾಗಲೂ ದತ್ತಾತ್ರೇಯನ ಜೊತೆ ಇರುತ್ತಿತ್ತು ಎಂದು ಭಕ್ತಾದಿ ಒಬ್ಬರು ಹೇಳಿದರು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
13/07/2022 08:50 pm