ಬೆಂಗಳೂರು: ಇತ್ತೀಚಿಗೆ ಕೋಮು ಸೌಹಾರ್ದತೆ ಕದಡುವ ಕೆಲಸ ನಡೆಯುತ್ತಿದೆ. ಹೆಚ್ಚೆಚ್ಚು ಆತಂಕಕಾರಿ ಬೆಳವಣಿಗೆ ಸೃಷ್ಟಿ ಮಾಡುತ್ತಿದ್ದಾರೆ ನಾವೆಲ್ಲ ಸೌಹಾರ್ದತೆಯಿಂದ ಬದುಕಬೇಕು ಭಾವೈಕ್ಯತೆಯಿಂದ ಇರಬೇಕು. ಹಿಂದೂ-ಮುಸ್ಲಿಂ ಭೇದ ಭಾವವಿಲ್ಲದೆ ಎಲ್ಲಾ ಜನಾಂಗದವರು ಋಷಿಯಿಂದ ಬದುಕಬೇಕು ಎಂದು ಆನೇಕಲ್ ಸಿಪಿಐ ಅಧ್ಯಕ್ಷ ಮಾದೇಶ್ ತಿಳಿಸಿದರು
ಆನೇಕಲ್ ಪಟ್ಟಣದ ಬಾದನಪುರದಲ್ಲಿ ಇರುವ ಸೌಭಾಗ್ಯ ಕಲ್ಯಾಣ ಮಂಟಪಲ್ಲಿ ಇಂದು ಸೌಹಾರ್ದ ರಂಜಾನ್ ಸ್ನೇಹ ಕೂಟವನ್ನು ಅಯೊಜನೆ ಮಾಡಲಾಗಿತ್ತು ಈ ಇದೇ ವೇಳೆ ಕಾರ್ಯಕ್ರಮ ಭಾಗಿಯಾಗಿ ಮಾತನಾಡಿದ ಸಿಪಿಐ ಅಧ್ಯಕ್ಷ ಮಾದೇಶ್ ಮಾತನಾಡಿ ಸಮಾಜದ ಸೌಹಾರ್ದ ದಿಂದ ಇರಬೇಕು ಇತ್ತೀಚಿಗೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದೆ. ಹೊಸ ಪೀಳಿಗೆಗೆ ಹೊಸ ಸಂದೇಶವನ್ನು ನೀಡಬೇಕಿದೆ. ಎಲ್ಲ ಯುವಕರಿಗೆ ಮತ್ತು ಜನರಿಗೆ ಐಕ್ಯತೆಯಿಂದ ಬದುಕಲಿಕ್ಕೆ ವಾತಾವರಣ ಸೃಷ್ಟಿ ಮಾಡಬೇಕಿದೆ. ಇದು ಎಲ್ಲಾ ನಾಗರಿಕ ಜವಾಬ್ದಾರಿ ಹೀಗಾಗಿ ಇದಕ್ಕೆ ಸಹಕಾರ ಮಾಡಿದ ಎಲ್ಲರಿಗು ಧನ್ಯವಾದ ಎಂದು ತಿಳಿಸಿದರು.
Kshetra Samachara
30/04/2022 10:23 pm