ಆನೇಕಲ್: ಮಹಿಳೆಯರು ಕಾನೂನು ತಿಳಿದುಕೊಳ್ಳುವುದು ಬಹಳ ಮುಖ್ಯ, ಸರ್ಕಾರದ ಯೋಜನೆಗಳ ಜೊತೆಯಲ್ಲಿ ಕಾನೂನು ತಿಳಿದುಕೊಂಡರೆ ಉತ್ತಮ ಜೀವನ ನಡೆಸ ಬಹುದು ಮತ್ತು ಟೆಲಿ ಲಾ ಯೋಜನೆಯು ಜನಸಾಮಾನ್ಯರಿಗೆ ಕಾನೂನು ಸೇವೆಯನ್ನು ಒದಗಿಸುವ ಸೇವೆಯಾಗಿದೆ. ಇದನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಕೀಲ ಪುರುಷೋತ್ತಮ್.ಎ ತಿಳಿಸಿದ್ದಾರೆ.
ಕೌಶಲ್ಯ ತರಬೇತಿ ಕೇಂದ್ರದಲ್ಲಿ ನಡೆದ ಟೆಲಿ ಲಾ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರಿಗೆ, ಮಕ್ಕಳಿಗೆ ಕಾನೂನು ಅವಶ್ಯಕ. ಮಹಿಳೆಯರು ಸಮಾಜದಲ್ಲಿ ಗೌರವಯುತವಾಗಿ ಕಾನೂನಿನ ಅರಿವು ಅಗತ್ಯವಿರುತ್ತದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಕಾನೂನಿನ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಟೆಲಿ ಲಾ ಆ್ಯಫ್ ನ್ನು ರೂಪಿಸಲಾಗಿದೆ. ಸಾರ್ವಜನಿಕರು ಈ ಆ್ಯಪ್ ನ್ನು ನೊಂದಣಿ ಮಾಡಿಕೊಂಡರೆ ವಕೀಲರು ಉಚಿತವಾಗಿ ಕಾನೂನು ಸಲಹೆ ನೀಡುತ್ತಾರೆಂದು ಅವರು ಮಾಹಿತಿ ನೀಡಿದ್ದಾರೆ.
ಟೆಲಿ ಲಾ ಯೋಜನೆಯ ಮೂಲಕ ಯಾವುದೇ ಇಲಾಖೆಯ ಸಮಸ್ಯೆಗಳನ್ನು ಮುಕ್ತವಾಗಿ ಕೇಳಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.
Kshetra Samachara
11/03/2022 06:48 am