ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ:ಶ್ರಾವಣ ಸಾಹಿತ್ಯ ಸಂಭ್ರಮ

ಆನೇಕಲ್ : ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಆನೇಕಲ್ ಪಟ್ಟಣದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಲಾಗಿತ್ತು ಪುರಸಭೆ ಸದಸ್ಯರಾದ ಬಿ ನಾಗರಾಜ್ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿ ಭಾಷೆ, ಮನಸುಗಳನ್ನು ಸಮೃದ್ಧಿಗೊಳಿಸಿ ಸಂಬಂಧಗಳನ್ನ ಹೆಚ್ಚಿಸುತ್ತದೆ ಇಂದು ಸಮಾಜದಲ್ಲಿ ಸಂಸ್ಕಾರ ಕೊರತೆಯಿದೆ ಎಂದು ಹೇಳಿದರು.

ಶ್ರಾವಣ ಮಾಸ ಮನಸುಗಳನ್ನು ಭಕ್ತಿಯಡೆಗೆ ಕರೆದೊಯ್ದು ನೆಮ್ಮದಿಯ ಬದುಕನ್ನ ಕಟ್ಟಿಕೊಡಲು ಸಹಕರಿಸುತ್ತದೆ ಪೂರ್ವಜರು ಇಂತಹ ಒಂದು ಸಂಪ್ರದಾಯವನ್ನ ಹುಟ್ಟು ಹಾಕಿದರು ಎಂದು ಬಣ್ಣಿಸಿದರು.

ಕಾರ್ಯಕ್ರಮವನ್ನು ಗಿಡ ಹಾಕುವುದರ ಮೂಲಕ ಪುರಸಭೆ ಸದಸ್ಯರಾದ ಬಿ ನಾಗರಾಜು ಉದ್ಘಾಟಿಸಿದರು ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ವಕೀಲರಾದ ಜಗನ್ನಾಥ್ ತೋರತ್ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ ಚಂದ್ರಶೇಖರ್ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಮಧು ಶಿಕ್ಷಕಿ ಸರೋಜಮ್ಮ ಇದ್ದರು.

Edited By : PublicNext Desk
Kshetra Samachara

Kshetra Samachara

03/08/2022 05:48 pm

Cinque Terre

752

Cinque Terre

0

ಸಂಬಂಧಿತ ಸುದ್ದಿ