ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿಯ ಯಲಿಯೂರು ಪಂಚಾಯ್ತಿಯಿಂದ ಪರಿಸರ ದಿನಾಚರಣೆ

ದೇವನಹಳ್ಳಿ: ಇಂದು ಎಲ್ಲಾ ಕಡೆ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡನೆಟ್ಟು ಪರಿಸರದ ಬಗ್ಗೆ ಕಾಳಜಿಯಿಂದ ಇರಲು ಪಣತೊಡಲಾಯ್ತು. ದೇವನಹಳ್ಳಿ ತಾಲ್ಲೂಕು ಯಲಿಯೂರು ಗ್ರಾಮ ಪಂಚಾಯ್ತಿ ವತಿಯಿಂದ ಪರಸರ ದಿನಾಚರಣೆ ಆಚರಿಸಲಾಯ್ತು.

ಮೊದಲಿಗೆ ಪಂಚಾಯ್ತಿಯ ಕಚೇರಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವತಿ, ಯುವಕರಿಗೆ ಸನ್ಮಾನಿಸಲಾಯ್ತು. ಕಚೇರಿ ಕಾರ್ಯಕ್ರಮದ ನಂತರ ಯಲಿಯೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹತ್ತಾರು ಗಿಡಗಳನ್ನ‌ ನೆಡಲಾಯ್ತು. ಶಿಕ್ಷಕರು, ಪೋಷಕರು, SDMC ಸದಸ್ಯರು ಮತ್ತು ಮಕ್ಕಳು ಸೇರಿ ಹತ್ತಾರು ಗಿಡ ನೆಟ್ಟರು.

ಇದೇ ವೇಳೆ ಮಾತನಾಡಿದ ಯಲಯೂರು ಸರ್ಕಾರಿ ಶಾಲೆಯ ಹೆಚ್.ಎಂ. ಪರಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕೆಂದರು. ಇನ್ನು ಇದೇ ಬೇಳೆಗಳು ಪಂಚಾಯ್ತಿ ಸದಸ್ಯರು ಹತ್ತಾರು ಜನ‌ ಗಿಡನೆಟ್ಟು ಪರಿಸರ ಸಂರಕ್ಷಿಸಬೇಕಿದೆ ಎಂದರು.

ಸುರೇಶ್ ಬಾಬು ಪಬ್ಲಿಕ್ ‌ನೆಕ್ಟ್ಸ್..ದೇವನಹಳ್ಳಿ

Edited By : PublicNext Desk
Kshetra Samachara

Kshetra Samachara

06/06/2022 12:01 am

Cinque Terre

1.17 K

Cinque Terre

0

ಸಂಬಂಧಿತ ಸುದ್ದಿ