ಯಲಹಂಕ: ಎಲ್ಲಾ ಕಡೆ ರಾಷ್ಟ್ರಧ್ವಜ ಮತ್ತು ಸ್ವಾತಂತ್ರ್ಯೋತ್ಸವದ ಸಿದ್ಧತೆಗಳು ಅತ್ಯಂತ ವೇಗವಾಗಿ ನಡೆಯುತ್ತಿವೆ. ಇಂದು ಬೆಂಗಳೂರಿನ ಯಲಹಂಕದ ಹೊಯ್ಸಲ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಪೂರ್ವಭಾವಿಯಾಗಿ ಯಲಹಂಕ ಕಾನೂನು ಸುವ್ಯವಸ್ಥೆ, ಯಲಹಂಕ ಸಂಚಾರಿ ಠಾಣೆಗಳ ನೂರಾರು ಪೊಲೀಸರು ಮತ್ತು ಸಾವಿರಾರು ಜನ ಶಾಲೆ, ಕಾಲೇಜು ವಿದ್ಯಾರ್ಥಿಗಳು ಪಥಸಂಚಲನದ ಅಭ್ಯಾಸ ನಡೆಸಿದರು.
ಬೆಂಗಳೂರು ಉತ್ತರ ತಹಶೀಲ್ದಾರ್ ರಾಮಲಕ್ಷ್ಮಣ ಅವರ ಪರಿಶೀಲನೆಯಲ್ಲಿ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಮಕ್ಷಮದಲ್ಲಿ ಹತ್ತಾರು ಶಾಲೆಗಳ 3500 ಜನ ವಿದ್ಯಾರ್ಥಿಗಳು, 12 ತಂಡಗಳು, 2 ಸಾಂಸ್ಕೃತಿಕ ತಂಡಗಳು ಗಂಟೆಗಟ್ಟಲೆ ಎಲ್ಲಾ ರೀತಿಯ ಪೂರ್ವ ಅಭ್ಯಾಸ ನಡೆಸಿದರು. ಈ ಸಲ ಬಿಬಿಎಂಪಿಯ ಪೌರಕಾರ್ಮಿಕರು ಪಥಸಂಚಲನ ನಡೆಸುವುದು ಸ್ವಾತಂತ್ರ್ಯೋತ್ಸವದ ಪ್ರಮುಖ ಆಕರ್ಷಣೆ ಎಂದು ಬೆಂಗಳೂರು ಉತ್ತರ ತಹಶೀಲ್ದಾರ್ ರಾಮಲಕ್ಷ್ಮಣ್ ತಿಳಿಸಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
Kshetra Samachara
14/08/2022 11:27 am