ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಾರ್ ನಲ್ಲಿ ಲಾಂಗ್ ಬೀಸಿದವರ ಮೇಲೆ ಬೀಯರ್ ಬಾಟಲ್ ನಿಂದ ಪ್ರತಿರೋಧ

ಬೆಂಗಳೂರು : ಬಾರ್ ಗೆ ನುಗ್ಗಿದ ಗ್ಯಾಂಗ್ ಮತ್ತು ಕುಡಿಯುತ್ತಾ ಕುಳಿತಿದ್ದ ಗ್ಯಾಂಗ್ ನಡುವೆ ಲಾಂಗ್ ಮತ್ತು ಬಿಯರ್ ಬಾಟೆಲ್ ನಿಂದ ಮಾರಾಮಾರಿ ನಡೆದಿರೊ ಘಟನೆ ಬೆಂಗಳೂರಿನ ಲಗ್ಗೆರೆಯ ಸನ್ ರೈಸ್ ಬಾರ್ ನಲ್ಲಿ ನಡೆದಿದೆ.

ಮೂರು ದಿನಗಳ ಹಿಂದೆ ಲಗ್ಗೆರೆಯ ಸನ್ ರೈಸ್ ಬಾರ್ ಗೆ ನುಗ್ಗಿದ ಇಬ್ಬರು ಪುಂಡರು ಚೀಲದಿಂದ ಲಾಂಗ್ ಹೊರತೆಗೆದಿದ್ದಾರೆ. ಕುಡಿತ್ತಾ ಕುಳಿತಿದ್ದ ರೌಡಿಶೀಟರ್ ಐಕಾನ್ ರಾಜು ಮತ್ತು ಆತನ ಸ್ನೇಹಿತನ ಮೇಲೆ ಲಾಂಗ್ ನಿಂದ ಅಟ್ಯಾಕ್ ಮಾಡಿದ್ದಾರೆ. ಅಟ್ಯಾಕ್ ಗೆ ಮೊಂಡು ಧೈರ್ಯ ತೋರಿರೋ ಐಕಾನ್ ರಾಜು, ಹಾಗು ಸ್ನೇಹಿತ ಬಿಯರ್ ಬಾಟೆಲ್ ನಿಂದ ಹೊಡೆದು ಎದುರಾಳಿ ಗ್ಯಾಂಗ್ ನ್ನು ಹಿಮ್ಮೆಟ್ಟಿಸಿದ್ದಾರೆ.

ಇನ್ನು ಯಾವ ರೀತಿಯ ಅಟ್ಯಾಕ್ ನಡೆದಿದೆ ಅಂದ್ರೆ ಮೈ ಜುಮ್ಮೆನ್ನುತ್ತೆ. ಆ ಕಡೆಯಿಂದ ಮಚ್ಚಿನ ದಾಳಿಯಾದ್ರೆ ಇವರಿಗೆ ಬಿಯರ್ ಬಾಟೆಲ್ ಗಳೇ ಆಯುಧ. ಕೊನೆಗೆ ಹೊಡೆಯಲು ಬಂದವರ ಲಾಂಗ್ ಕಸಿದು ಓಡಿಸಿದ್ದಾರೆ. ಅಸಲಿಗೆ ಈ ಅಟ್ಯಾಕ್ ಗೆ ಕ್ರಿಕೆಟ್ ಬೆಟ್ಟಿಂಗ್ ಕಾರಣ ಎನ್ನಲಾಗ್ತಿದೆ. ಬೆಟ್ಟಿಂಗ್ ಡೀಲ್ ವಿಚಾರವಾಗಿ ಅರುಣ್ ಎನ್ನುವ ವ್ಯಕ್ತಿಯನ್ನ ಹುಡುಕಿಕೊಂಡು ಬಂದಿದ್ದ ಗ್ಯಾಂಗ್ ಗೆ ಅರುಣ್ ಸಹೋದರ ಐಕಾನ್ ರಾಜು ಕಂಡಿದ್ದಾನೆ. ಆಗ ಅಟ್ಯಾಕ್ ನಡೆಸಿದ್ದಾರೆ. ಹೀಗೆಲ್ಲಾ ಪುಡಿ ರೌಡಿಗಳು ಮಚ್ಚು ಹಿಡ್ಕೊಂಡು ಗಲಾಟೆ ಮಾಡ್ತಿದ್ರೆ, ನಮ್ಮ ಪೊಲೀಸ್ರು ನಿದ್ದೆ ಮಾಡ್ತಿದ್ದಂತೆ ಕಾಣ್ತಿದೆ.

Edited By : Nagesh Gaonkar
PublicNext

PublicNext

12/09/2022 08:23 am

Cinque Terre

44.88 K

Cinque Terre

1

ಸಂಬಂಧಿತ ಸುದ್ದಿ