ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪ-ಅಮ್ಮ ಶಾಪಿಂಗ್ ಕರೆದುಕೊಂಡು ಹೋಗದಿದ್ದಕ್ಕೆ ನೇಣಿಗೆ ಶರಣಾದ ಬಾಲಕಿ

ಬೆಂಗಳೂರು: ಮಕ್ಕಳು ಅದ್ಯಾವ ಸಮಯದಲ್ಲಿ ಅದ್ಯಾವ ರೀತಿ ಯೋಚನೆ ಮಾಡ್ತಾರೆ ಅಂತಾ ಗೊತ್ತಾಗಲ್ಲ.‌ ಸಣ್ಣ ಸಣ್ಣ ವಿಷಯಕ್ಕೂ ಸಾವಿಗೆ ಶರಣಾಗೋ ದುಸ್ಸಾಹಸಕ್ಕೆ ಮಕ್ಕಳು ಮುಂದಾಗ್ತಿದ್ದಾರೆ. ಶಾಪಿಂಗ್‌ಗೆ ಕರೆದುಕೊಂಡು ಹೊಗದಿದ್ದಕ್ಕೆ ಮುನಿಸಿಕೊಂಡ ಬಾಲಕಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಇನ್ನೂ ಐದನೇ ತರಗತಿ ಓದುತ್ತಿದ್ದ 11ವರ್ಷ ವೈಸಾಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹಬ್ಬದ ಹಿನ್ನಲೆ ಬಟ್ಟೆ ಖರೀದಿಗೆ ಪೋಷಕರು ಮುಂದಾಗಿದ್ರು. ಕಳೆದ ಕೆಲ ದಿನಗಳ ಹಿಂದೆ ಬಾಲಕಿಗೆ ಬಟ್ಟೆ ಕೊಡಿಸಿದ್ದರು .ಹೀಗಾಗಿ ಆಕೆ ಬಿಟ್ಟು ಉಳಿದವರಿಗೆ ಬಟ್ಟೆ ಕೊಡಿಸಲು ಶನಿವಾರ ಸಂಜೆ ಆಕೆಯನ್ನ ಮನೆಯಲ್ಲೆ ಬಿಟ್ಟು ಇನ್ನಿಬ್ಬರು ಮಕ್ಕಳ ಬಟ್ಟೆ ಖರೀದಿಗೆ ತೆರಳಿದ್ದರು. ಇದ್ರಿಂದ ಬೇಸರಗೊಂಡಿದ್ದ ವೈಶಾಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಶರಣಾಗಿದ್ದಾಳೆ. ಈ ಕುರಿತು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Abhishek Kamoji
Kshetra Samachara

Kshetra Samachara

22/08/2022 12:41 pm

Cinque Terre

3.27 K

Cinque Terre

0

ಸಂಬಂಧಿತ ಸುದ್ದಿ