ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಾರೋದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ : ನಕಲಿ ನಂಬರ್ ಪ್ಲೇಟ್ ತಂದ ಆಪತ್ತು

ಬೆಂಗಳೂರು: ಸಂಚಾರ ಪೊಲೀಸರ ತನಿಖೆ ವೇಳೆ ನಕಲಿ ನಂಬರ್ ಪ್ಲೇಟ್ ಅವಾಂತರ ಬೆಳಕಿಗೆ ಬಂದಿದೆ. ಬೈಕ್ ಮಾಲೀಕ ಮಾಡಿದ ಎಡವಟ್ಟಿನಿಂದಾಗಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಪರಿತಪಿಸುವಂತಾಗಿದೆ.

ಪೊಲೀಸರ ನಿಖರ ತನಿಖೆಯಿಂದ ಸತ್ಯಾಂಶ ಹೊರಬಂದಿದ್ದು,ಕಳೆದ ಮೇ ತಿಂಗಳಲ್ಲಿ ಶಾಲಾ ಬಸ್ ಮತ್ತು ಬೈಕ್ ನಡುವೆ ಬನಶಂಕರಿ ಠಾಣಾ ವ್ಯಾಪ್ತಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಅಪಘಾತ ನಡೆದಿತ್ತು. ಈ ವೇಳೆ ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಬನಶಂಕರಿ ಸಂಚಾರಿ ಪೊಲೀಸರು ತನಿಖೆ ಆರಂಭಿಸಿದರು.

ಪೊಲೀಸರ ತನಿಖೆ ವೇಳೆ ಬೈಕ್ ಮಾಲೀಕನ ಮಹಾ ಎಡವಟ್ಟು ಬಯಲಾಗಿದೆ. ಅಸಲಿಗೆ ಬೈಕ್ ಮಾಲೀಕ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಬೈಕ್ ಓಡಿಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

ಸ್ಪ್ಲೆಂಡರ್ ಪ್ಲಸ್ ಬೈಕ್ ಗೆ ಕರ್ನಾಟಕ ನೋಂದಣಿ ನಂಬರ್ ಪ್ಲೇಟ್ ಬಳಸಿ ರೈಡಿಂಗ್ ಮಾಡುತ್ತಿದ್ದ. ಅಸಲಿಗೆ ಮಾಲೀಕ ಆ ಬೈಕ್ ಅನ್ನು ಪೊಲೀಸರ ವಾಹನ ಹರಾಜಿನಲ್ಲಿ ಖರೀದಿ ಮಾಡಿದ್ದ.

ಇನ್ನು ಮಾಲೀಕನ ಹೆಸರು ಅನಂತರಾಮು ಎಂದು. ಬೈಕ್ ಖರೀದಿ ಬಳಿಕ ಬೈಕ್ ದಾಖಲಾತಿಗಳನ್ನು ರೆಡಿ ಮಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದ. ಆತ ಖರೀದಿಸಿದ್ದು MH-31 BX-8023 ನೋಂದಣಿಯ ಬೈಕ್ ಆಗಿತ್ತು. ಆದರೆ, ಹೊರರಾಜ್ಯದ ಬೈಕ್ ಅನ್ನು ನಗರದಲ್ಲಿ ಓಡಿಸಿದರೆ ಟ್ರಾಫಿಕ್ ಪೊಲೀಸರು ಬೈಕ್ ಹಿಡಿಯಬಹುದು ಎಂದು ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿದ್ದ.

MH-31 BX-8023 ನಂಬರ್ ಪ್ಲೇಟ್ ತೆಗೆದು KA-04 HE-5475 ನೋಂದಣಿಯ ನಂಬರ್ ಬಳಸಿ ಬೈಕ್ ಸವಾರಿ ಮಾಡುತ್ತಿದ್ದ. ದುರಾದೃಷ್ಟವಶಾತ್ ಮೇ ತಿಂಗಳಲ್ಲಿ ಈ ಬೈಕ್ ನಿಂದ ಅಪಘಾತವಾಗಿತ್ತು. ಅಪಘಾತದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಓರ್ವ ಬಾಲಕಿ ಮೃತಪಟ್ಟಿದ್ದಳು. ಈ ವೇಳೆ ಬೈಕ್ ನಂಬರ್ ಜಾಡು ಹಿಡಿದು ಮಾಲೀಕನನ್ನು ವಿಚಾರಣೆ ನಡೆಸಲಾಗಿತ್ತು. ಆದರೆ, ಅಪಘಾತಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದ.

ಇದೀಗ ಅಸಲಿ ಬೈಕ್ ಮಾಲೀಕ ಸಿಕ್ಕಿಬಿದ್ದಿದ್ದು. ಸರಿಯಾದ ಡಾಕ್ಯುಮೆಂಟ್ ಇಲ್ಲದೆ ಮತ್ತು ನಕಲಿ ನಂಬರ್ ಪ್ಲೇಟ್ ಬಳಕೆಯಿಂದ ಎಲ್ಲರಿಗೂ ಸಂಕಷ್ಟ. ನಕಲಿ ನಂಬರ್ ಪ್ಲೇಟ್ ಬಳಸಿ ವಂಚನೆ ಹಿನ್ನಲೆಯಲ್ಲಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮಾಲೀಕನ ವಿರುದ್ಧ ಕೇಸ್ ದಾಖಲಲಾಗಿದೆ.

Edited By : Nagesh Gaonkar
PublicNext

PublicNext

18/08/2022 03:19 pm

Cinque Terre

29.36 K

Cinque Terre

0

ಸಂಬಂಧಿತ ಸುದ್ದಿ