ಆನೇಕಲ್ : ಹಣದ ವಿಚಾರಕ್ಕೆ ಕೊಲೆ ಮಾಡಿ ಪರಾರಿಯಾಗಿದ್ದ, ಆರೋಪಿಯನ್ನು ಸೂರ್ಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವನಕನಹಳ್ಳಿ ಮೂಲದ ಮಣಿಕಂಠ ಹಾಗೂ ಲಕ್ಷ್ಮಿಸಾಗರ ಗ್ರಾಮದ ಚೇತನ್ ಕುಮಾರ್ ಬಂಧಿತ ಆರೋಪಿಗಳು.
ತಮಿಳುನಾಡಿನ ಮಾದಮ್ಮ ಪತಿ ಸಾವಿನ ಬಳಿಕ ಲಕ್ಷ್ಮೀಸಾಗರ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಮಣಿಕಂಠ ಪರಿಚಯವಾಗಿ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ನಿತ್ಯ ಕೆಲಸ ಮುಗಿಸಿ ಮನೆಗೆ ಬಂದು ಇಬ್ಬರು ಮದ್ಯಸೇವನೆ ಮಾಡುತ್ತಿದ್ದರಂತೆ. ಅದೇ ರೀತಿ ಆಗಸ್ಟ್ ಒಂದನೇ ತಾರೀಖಿನಂದು ಮಣಿಕಂಠ ಹಾಗೂ ಆತನ ಸ್ನೇಹಿತ ಚೇತನ್ ಕುಮಾರ್ ಮಾದಮ್ಮ ಜೊತೆ ಸೇರಿ ಮದ್ಯ ಸೇವನೆ ಮಾಡಿದ್ರು.
ಹಣದ ವಿಚಾರವಾಗಿ ಮಾದಮ್ಮ ಹಾಗೂ ಮಣಿಕಂಠನ ನಡುವೆ ಗಲಾಟೆ ನಡೆದಿದೆ. ಅಲ್ಲಿಯೇ ಇದ್ದ ಮರದ ದೊಣ್ಣೆಯಿಂದ ಮಾದಮ್ಮನ ಮೇಲೆ ತಲೆಗೆ ಹಲ್ಲೆ ಮಾಡಿದ್ದಾನೆ. ಮಾದಮ್ಮ ಕಿರುಚಾಡುವ ಶಬ್ದ ಕೇಳಿ ಮಾಲೀಕ ಹೋಗಿ ನೋಡಿದಾಗ ಮಣಿಕಂಠ ಹಾಗೂ ಚೇತನ್ ಕುಮಾರ್ ಇಬ್ಬರು ಪರಾರಿಯಾಗಿದ್ದಾರೆ. ಇನ್ನು ಘಟನೆ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದಾಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
PublicNext
10/08/2022 04:23 pm