ಬೆಂಗಳೂರು: ಸಾಮಾನ್ಯವಾಗಿ ಚೈನ್ ಸ್ನ್ಯಾಚ್ ಮಾಡೋರು ಒಂದು ಗ್ಯಾಂಗ್ ಮಾಡ್ಕೊಂಡು ಪಕ್ಕಾ ಸ್ಕೆಚ್ ಹಾಕಿ ಚೈನ್ ಗಳನ್ನು ಎಗರಿಸ್ತಾರೆ. ಆದ್ರೆ ಈತ ಯಾವ ಗ್ಯಾಂಗ್ ಕಟ್ಟಿಕೊಳ್ಳದೇ ಒಬ್ಬನೇ ಸರಗಳ್ಳತನಕ್ಕೆ ಇಳಿದಿದ್ದ.
ಈ ಸಿಸಿಟಿವಿ ದೃಶ್ಯದಲ್ಲಿ ಅತ್ತಿಂದಿತ್ತ ಬೈಕ್ ರೇಸರ್ ತರಹ ಓಡಾಡುತ್ತಿರುವಂತೆ ಕಾಣ್ತಿರುವ ಈತನೇ ನೋಡಿ ಅಮುಲ್ ಶಿಂಧೆ. ಈತ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಾಯಿದ್ದ. ಪುಣೆ ಮೂಲದ ಅಮುಲ್ ಶಿಂಧೆ ಮಹಾರಾಷ್ಟ್ರ, ಮುಂಬೈ, ಹೈದರಾಬಾದ್, ತಮಿಳುನಾಡು ಹೀಗೆ ಅನೇಕ ಕಡೆಗಳಲ್ಲಿ ಸರಗಳ್ಳತನ ಮಾಡಿದ್ದಾನೆ. ಇನ್ನು ಈತನ ಮೇಲೆ ಬರೋಬ್ಬರಿ 28 ಕೇಸ್ ಗಳಿವೆ. ಇದೀಗ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಬಂಧಿತನಿಂದ 6.5 ಲಕ್ಷದ ಎರಡು ಚಿನ್ನದ ಸರಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
PublicNext
05/08/2022 06:06 pm