ದೊಡ್ಡಬಳ್ಳಾಪುರ: ಸರಗಳ್ಳತಕ್ಕೆ ಅವನಿಗೆ ಟೀ ಕುಡಿಯೋದು ಒಂದು ನೆಪ ಮಾತ್ರ ಆಗಿತ್ತು. ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಸರಗಳ್ಳ ಟೀ ಕುಡಿದ ಹಣಕ್ಕೆ ಚಿಲ್ಲರೆ ಕೊಡೋ ಗ್ಯಾಪ್‌ನಲ್ಲಿ ಅಂಗಡಿ ಮಾಲೀಕಳ ಮಾಂಗಲ್ಯ ಸರವನ್ನ ಕಿತ್ಕೊಂಡು ಪರಾರಿಯಾಗಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮಸಂದ್ರ ಗ್ರಾಮದ ಸುಮಿತ್ರಮ್ಮರವರ ಚಿಲ್ಲರೆ ಅಂಗಡಿಯಲ್ಲಿ ಘಟನೆ ನಡೆದಿದೆ. ಇಂದು ಸಂಜೆ ಸುಮಿತ್ರಮ್ಮ ಅಂಗಡಿಯಲ್ಲಿ ವ್ಯಾಪಾರದ ವೇಳೆ ಟೀ ಕುಡಿಯುವ ನೆಪದಲ್ಲಿ ಅಪರಿಚಿತ ಕಳ್ಳ ಪಲ್ಸ್ ಬೈಕ್‌ನಲ್ಲಿ ಬಂದಿದ್ದಾನೆ. ಈ ವೇಳೆ ಟೀ ಕುಡಿದು ನಂತರ ಹಣ ನೀಡಿದ್ದಾನೆ. ಆನಂತರ ಸುಮಿತ್ರಮ್ಮ ಚಿಲ್ಲರೆ ನೀಡುವ ವೇಳೆ ಸುಮಾರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ವಿಷಯ ತಿಳಿದ ತಕ್ಷಣವೇ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಡಿ.ಹೆಚ್.ಮುನಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಲಗ್: ಖತರ್ನಾಕ ಕಳ್ಳ ಚಿನ್ನ ಕದ್ದ
Kshetra Samachara
29/07/2022 10:50 pm