ಬೆಂಗಳೂರು: ತ್ರಿವಳಿ ತಲಾಖ್ ನಿಷೇಧ ಆಗಿ ವರ್ಷಗಳೇ ಕಳೆದರೂ, ತಲಾಖ್ ನೀಡುವವರು ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ಸದ್ಯ ಬೆಂಗಳೂರಿನಲ್ಲಿ ಪತಿಯಾರನೊಬ್ಬ ಲಿಫ್ಟ್ ನಲ್ಲಿಯೇ ತ್ರಿವಳಿ ತಲಾಖ್ ಹೇಳಿದ್ದಾನೆ.ಈತನ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೌದು ಮೊಹಮ್ಮದ್ ಅಕ್ರಂ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ ಸೇರಿದಂತೆ ತ್ರಿವಳಿ ತಲಾಖ್ ವಿರುದ್ಧ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಮದುವೆಯ ಸಂದರ್ಭದಲ್ಲಿ ತಮ್ಮ ತವರಿನವರು ಪತಿಗೆ ಒಟ್ಟು 30 ಲಕ್ಷ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೆ ತನ್ನ ಪತಿ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಒಡ್ಡಿದ್ದರು. ಇದು ಕೊಡದ ಕಾರಣ, ಹಿಂಸೆ ನೀಡುತ್ತಿದ್ದಾರೆ ಎಂದು ತಸ್ಮಿಯಾ ಹುಸೇನಿ ದೂರು ದಾಖಲಿಸಿದ್ದಾರೆ.
ತಾವು ರಂಜಾನ್ ಹಬ್ಬಕ್ಕೆ ತವರಿಗೆ ಹೋದಾಗ 10 ಲಕ್ಷ ರೂಪಾಯಿ ತರಲು ಹೇಳಿದ್ದ. ಹಣ ತರದಿದ್ದಲ್ಲಿ ಮನೆಗೆ ಸೇರಿಸೋದಿಲ್ಲ ಎಂದಿದ್ದ. ನಂತರ ನಾನು ಅದನ್ನು ಕೊಡಲು ಆಗಿರಲಿಲ್ಲ. ಆಗ ಅಪಾರ್ಟ್ಮೆಂಟ್ ಒಂದಕ್ಕೆ ಕರೆಸಿಕೊಂಡಿದ್ದ ಪತಿ, ಹಣ ನೀಡಿಲ್ಲ ಅಂದ್ರೆ ಮಂಗಳಸೂತ್ರ ಬಿಚ್ಚಿ ಕೊಡುವಂತೆ ಹೇಳಿದ್ದ. ಇದಕ್ಕೆ ಒಪ್ಪಲಿಲ್ಲ. ಅಪಾರ್ಟ್ಮೆಂಟ್ ನಿಂದ ಲಿಫ್ಟ್ ನಲ್ಲಿ ಹೋಗುತ್ತಿದ್ದಾಗ ಮೂರು ಬಾರಿ ತಲಾಖ್ ತಲಾಖ್ ತಲಾಖ್ ಆಂತ ಹೇಳಿ ಪತ್ನಿಯನ್ನ ಹೊರ ದಬ್ಬಿದ್ದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಪತಿ ಅಕ್ರಂ ವಿರುದ್ಧ ಬೆಂಗಳೂರಿನ ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
Kshetra Samachara
29/07/2022 03:47 pm