ವರದಿ- ಬಲರಾಮ್ ವಿ
ಬೆಂಗಳೂರು: ಕಾರು ಚಾಲಕ ಕೈ ತೋರಿಸಿದ ಎಂಬ ಕಾರಣಕ್ಕೆ ದ್ವಿಚಕ್ರ ವಾಹನ ಸವಾರನಿಂದ ಕಾರು ಚಾಲಕನ ಮೇಲೆ ಮನಸು ಇಚ್ಚೆ ಹಲ್ಲೆ ನಡೆಸಿರುವ ಘಟನೆ ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡಿ ಕೆರೆಯ ಬಳಿ ನಡೆದಿದೆ.
ಕಾರು ಚಾಲಕ ಆನಂದ್ ಹಲ್ಲೆಗೊಳಗಾದ ವ್ಯಕ್ತಿ. ಆನಂದ್ ಅವರು ಗರುಡಾಚಾರ್ಯಪಾಳ್ಯದ ಖಾಸಗೀ ಕಂಪನಿಯ ಉದ್ಯೋಗಿಯಾಗಿದ್ದು, ಹೂಡಿಯಿಂದ ಕೆಆರ್ ಪುರನತ್ತ ಪ್ರಯಾಣಿಸುತ್ತಿದ್ದ ವೇಳೆ ಕಾರನ್ನು ಓವರ್ ಟೇಕ್ ಮಾಡುತ್ತಿದ್ದ ದ್ವಿಚಕ್ರ ವಾಹನ ಮುಂಬದಿಯಿಂದ ಕ್ಯಾಂಟರ್ ಬರುತ್ತಿದೆ ಎಂದು ಕೈ ಸನ್ನೆ ಮಾಡಿದ್ದಕ್ಕಾಗಿ ಹಲ್ಲೆ ನಡೆಸಲಾಗಿದೆ.
ದ್ವಿಚಕ್ರ ವಾಹನದ ಕೀ ಯಿಂದ ಮುಖ ಹಾಗೂ ತಲೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ.
ಸದ್ಯ ಹಲ್ಲೆ ಮಾಡಿದ ಆರೋಪಿ ಪರಾರಿಯಾದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಕೆಆರ್ ಪುರ ಪೊಲೀಸರು ಕಾರ್ ಹಾಗೂ ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.
PublicNext
27/07/2022 06:32 pm