ಬೆಂಗಳೂರು:ಪಿಎಸ್‌ಐ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣವನ್ನ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು,ಎಡಿಜಿಪಿ ಅಮೃತ್ ಪೌಲ್ ಮೊಬೈಲ್ ನಲ್ಲಿನ ಡೇಟ್ ರಿಟ್ರೀವ್ ಮಾಡಿ ಟೆಕ್ನಿಕಲ್ ಸಾಕ್ಷ್ಯ ಸಂಗ್ರಹಕ್ಕೆ ಸಿಐಡಿ ಮುಂದಾಗಿದೆ.
ಇದರ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಪಿಎಸ್‌ಐ ಮನೋಜ್ ಸಿಐಡಿಗೆ ಬಲೆಗೆ ಬಿದ್ದಿದ್ದಾರೆ. ಮಧ್ಯವರ್ತಿಗಳು ಮತ್ತು ಡಿವೈಎಸ್‌ಪಿ ಶಾಂತಕುಮಾರ್ ಸಂಪರ್ಕ ಹಿನ್ನಲೆ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ. ಮನೋಜ್ ಪಿಎಸ್‌ಐ ಅಕ್ರಮದಲ್ಲಿ ಬಂಧಿಯಾಗಿರೋ ಎರಡನೇ ಪಿಎಸ್‌ಐ ಆಗಿದ್ದಾರೆ. ಈ ಹಿಂದೆ ಬ್ಯಾಡರಹಳ್ಳಿ ಠಾಣೆಯ ಪಿಎಸ್‌ಐ ಹರೀಶ್ ಬಂಧನವಾಗಿತ್ತು.
ಇನ್ನೂ ಇದೇ ತಿಂಗಳ ಅಂತ್ಯದಲ್ಲಿ ಪ್ರಾಥಮಿಕ ದೋಷಾರೋಪಣೆ ಪಟ್ಟಿ ಸಲ್ಲಿಸಲು ಬೆಂಗಳೂರು ಸಿಐಡಿ ತಯಾರಿ ನಡೆಸಿದೆ.
ನಾಪತ್ತೆಯಾಗಿರೋ ಮೂವರು ಪಿಎಸ್‌ಐಗಳು ಮತ್ತು ಅನುಮಾನಿತ ಅಭ್ಯರ್ಥಿಗಳ ಹುಡುಕಾಟವನ್ನು ಸಿಐಡಿ ನಡೆಸ್ತಿದೆ.ಎಡಿಜಿಪಿ, ಡಿವೈಎಸ್‌ಪಿ ಸೇರಿದಂತೆ ನೇಮಕಾತಿ ವಿಭಾಗದ ಟೀಂ ಹಾಗೂ ಕೆಲ ಬಂಧಿತರ ಹೇಳಿಕೆ ಜೊತೆಗೆ ಸಾಕ್ಷ್ಯ ಕಲೆ ಹಾಕಿದ್ದು
ಸಿಐಡಿ ಡಿಜಿ ಸಂಧುಗೆ ವಾರದೊಳಗೆ ತನಿಖಾ ರಿಪೋರ್ಟ್ ಸಲ್ಲಿಸಿ,ದೋಷಾರೋಪಣೆ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದೆ.
PublicNext
14/07/2022 05:21 pm