ನೆಲಮಂಗಲ: ಅವ್ರಿಬ್ರು ಸ್ನೇಹಿತ್ರು ಸಣ್ಣಪುಟ್ಟ ಕೆಲಸಗಳನ್ನ ಮಾಡ್ಕೊಂಡು ಜೀವನ ಸಾಗಿಸುತ್ತಿದ್ರು. ಆದ್ರೆ ಶಾರ್ಟ್ ಟೈಂನಲ್ಲಿ ಹೆಚ್ಚು ಹಣ ಮಾಡ್ಬೇಕು ಅಂತ ಅಡ್ಡದಾರಿಯಲ್ಲಿ ಹೋಗಿ ಪೊಲೀಸರಿಗೆ ತಗ್ಲಾಕ್ಕೊಂಡಿದ್ದಾರೆ. ಅಷ್ಟಕ್ಕೂ ಆ ಸ್ನೇಹಿತ್ರು ಪೊಲೀಸ್ರಿಗೆ ತಗ್ಲಾಕ್ಕೊಳೋ ಅಂತ ಕೆಲ್ಸ ಮಾಡಿದ್ದಾದ್ರು ಏನೂ ಅಂತೀರಾ ಇಲ್ಲಿದೆ ನೋಡಿ
ಹೀಗೆ ಪೊಲೀಸ್ ಠಾಣೆ ಮುಂದೆ ಹೊಂಡಾ ಯುನಿಕಾರ್ನ್ ಬೈಕ್ ಹಿಡ್ಕೊಂಡು ನಿಂತಿರೋ ಇವರಿಬ್ರು ಬೆಂಗಳೂರು ಉತ್ತರ ತಾಲ್ಲೂಕಿನ ಗೋಪಾಲಪುರ ಮೂಲದ 38 ವರ್ಷದ ಉದಯ್ ಕುಮಾರ್ ಹಾಗೂ ತುಮಕೂರು ಜಿಲ್ಲೆ ಕೊರಟಗೆರೆ ಮೂಲದ 50 ವರ್ಷದ ಸದಾನಂದ ಅಂತ. ಸ್ನೇಹಿತರಾಗಿದ್ದ ಇವರಿಬ್ರು ಸಣ್ಣಪುಟ್ಟ ಕೆಲ್ಸ ಮಾಡ್ಕೊಂಡಿದ್ರು, ಆದ್ರೆ ದುಡಿಮೆಯಲ್ಲಿ ಬಂದ ಹಣ ಜೀವನಕ್ಕೆ ಸಾಕಾಗದಿದ್ದಕ್ಕೆ ಸುಲಭವಾಗಿ, ಶಾರ್ಟ್ ಟೈಂನಲ್ಲಿ ಹೆಚ್ಚು ಹಣ ಮಾಡ್ಬೇಕು ಅಂತ ರಸ್ತೆಯಲ್ಲಿ ಸಂಚರಿಸೋ ಸರಕು ಸಾಗಾಟ ವಾಹನಗಳನ್ನ ಟಾರ್ಗೆಟ್ ಮಾಡಿ ದಂಡ ವಸೂಲಿಗಿಳಿದಿದ್ರು. ಅದೇ ರೀತಿ ಕ್ಯಾಂಟರ್ ವಾಹನವನ್ನು ಅಡ್ಡಗಟ್ಟಿ ನಾವು ಜಿಎಸ್‌ಟಿ ಅಧಿಕಾರಿಗಳು ಎಂದು ಹೇಳಿ 1.5 ಲಕ್ಷಕ್ಕೂ ಹೆಚ್ಚು ಹಣ ಲಪಟಾಯಿಸಿ ಪರಾರಿಯಾಗಿದ್ದ ಆರೋಪಿಗಳಿಬ್ಬರೂ ಸದ್ಯ ದಾಬಸ್‌ಪೇಟೆ ಠಾಣಾ ಪೊಲೀಸ್ರಿಗೆ ಸಿಕ್ಕಿ ಬಿದ್ದಿದ್ದಾರೆ.
ಹೌದು ಕಳೆದ ತಿಂಗಳ 4ನೇ ತಾರೀಖಿನಂದು ಮುಂಬೈನಿಂದ ಬೆಂಗಳೂರಿಗೆ ಕೆಟ್ಟಿದ್ದ ಮಷಿನ್ ಒಂದನ್ನು ಕ್ಯಾಂಟರ್ ವಾಹನದಲ್ಲಿ ಕಳುಹಿಸಲಾಗಿತ್ತು. ಮಾಲೀಕ ರಾಜೇಂದ್ರ ಕೊಟಿಯಾನ್ ಎಂಬುವವರಿಗೆ ಸೇರಿದ ಮಷಿನ್ ಆಗಿದ್ದು, ಕ್ಯಾಂಟರ್‌ನಲ್ಲಿ ಸಾಗಿಸುತ್ತಿದ್ದ ವೇಳೆ ದಾಬಸ್‌ಪೇಟೆ ಸಮೀಪದ ಹಳೇನಿಜಗಲ್ ಗ್ರಾಮದ ಹೆಚ್‌ಪಿ ಪೆಟ್ರೋಲ್ ಬಂಕ್ ಬಳಿ ಆರೋಪಿಗಳು ವಾಹನವನ್ನ ಅಡ್ಡಗಟ್ಟಿ, ನಾವು ಜಿಎಸ್‌ಟಿ ಅಧಿಕಾರಿಗಳು ನೀವು ಸಾಗಿಸುತ್ತಿರೋ ಮಷಿನ್ಗೆ ಇ- ವೇ ಬಿಲ್ ಕೊಡಿ ಇಲ್ಲವಾದಲ್ಲಿ ನಿಮ್ಮ ವಾಹನವನ್ನ ಸೀಝ್ ಮಾಡುತ್ತೇವೆ ಎಂದು ಚಾಲಕನಿಗೆ 2.5 ಲಕ್ಷ ಫೈನ್ ಕಟ್ಟುವಂತೆ ಹೆದರಿಸಿದ್ದಾರೆ.
ಬಳಿಕ ಚಾಲಕ ಇದು ಕೆಟ್ಟ ಮೆಷಿನ್ ಎಂದು ಹಣ ನೀಡಲು ನಿರಾಕರೊಸಿದ್ದಾನೆ ಬಳಿಕ ಮಾಲೀಕ ರಾಜೇಂದ್ರ ಕೊಟಿಯನ್ ಬಳಿಕ 1.5 ಲಕ್ಷ ಹಣ ಕೊಡಿ ನಿಮ್ಮ ಗಾಡಿ ಬಿಟ್ಟು ಬಿಡುತ್ತೇವೆಂದು ಕ್ಯಾಂಟರ್ ಚಾಲಕನ ಪೋನ್ ಪೇ ಸೇರಿದಂತೆ ವಿವಿಧ ನಂಬರ್‌ಗಳಿಂದ ಫೋನ್ ಪೇ ಮಾಡ್ಸ್ಕೊಂಡು ಅಲ್ಲಿಂದ ಪರಾರಿಯಾಗಿದ್ರು. ಈ ಘಟನೆ ಸಂಬಂಧ ಮರು ದಿನ ವಿಚಾರಿಸಿದಾಗ ಅವರುಗಳು ಜಿಎಸ್‌ಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಮೋಸ ಮಾಡಿದ್ದಾರೆ ಎಂದು ತಿಳಿದ ಬೆನ್ನಲ್ಲೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ದಾಬಸ್‌ಪೇಟೆ ಪೊಲೀಸ್ರು ತಲೆ ಮರೆಸಿಕೊಂಡಿದ್ದ ಇಬ್ಬರು ಅರೋಪಿಗಳನ್ನ ಮೊಬೈಲ್ ಟವರ್ ಲೊಕೇಷನ್ ಸಹಾಯದಿಂದ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಬೈಟ್: ರಾಜೇಂದ್ರ ಕೊಟಿಯನ್, ನೊಂದ ಮಾಲೀಕ
PublicNext
12/07/2022 09:42 am