ಬೆಂಗಳೂರು: ಬೆಂಗಳೂರಿನ ಸರ್ವೆ ಸೆಟಲ್ ಮೆಂಟ್ & ಲ್ಯಾಂಡ್ ರೆಕಾರ್ಡ್ಸ್ ಆಯುಕ್ತ ಮುನೀಷ್ ಮುದ್ಗಲ್ ಅವರಿಗೆ ವರ್ಗಾವಣೆ ಪ್ರಶ್ನಿಸಿ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಕಂದಾಯ ಇಲಾಖೆ ಆಯುಕ್ತರು ಸಂಪಿಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆಸಾಮಿಯನ್ನು ಬಂಧಿಸಿದ್ದಾರೆ.
ಕಂದಾಯ ಇಲಾಖೆ ಆಯುಕ್ತ ಮುನೀಷ್ ಮುದ್ಗಲ್ ರವರ ಬಳಿ ಆನಂದ್ ಎಂಬ ವ್ಯಕ್ತಿ ಚಾಲಕನಾಗಿ ಕೆಲಸ ಮಾಡ್ತಿದ್ದ. ಆಯುಕ್ತರು ಆಡಳಿತದ ಭಾಗವಾಗಿ ಆನಂದ್ ನನ್ನು ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಿದ್ದರು. ಇದಾದ ನಂತರ ಅಬಕಾರಿ ಸಚಿವ ಗೋಪಾಲಯ್ಯ ಅವರ ಪರ್ಸನಲ್ ಸೆಕ್ರೆಟರಿ ಎಂದು ಪರಿಚಯ ಮಾಡಿಸಿಕೊಂಡ ಆಸಾಮಿ ಮಧ್ಯರಾತ್ರಿ ಮುನೀಷ್ ಮುದ್ಗಲ್ ರವರಿಗೆ ಕರೆ ಮಾಡಿ ಬೆದರಿಸಿದ್ದಾನೆ.
ಕೂಡಲೇ ಆನಂದ್ ನನ್ನು ಬೆಂಗಳೂರಿಗೆ ವರ್ಗಾವಣೆ ಮಾಡಬೇಕು. ಇಲ್ಲವಾದರೆ ನಿಮ್ಮನ್ನೇ ಬೆಂಗಳೂರಿನಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿಸಿ ಬಿಡುತ್ತೇನೆ ಎಂದು ಧಮ್ಕಿ ಹಾಕಿದ್ದ. ಮಧ್ಯರಾತ್ರಿ ಹತ್ತಕ್ಕೂ ಹೆಚ್ಚು ಸಲ ಹೀಗೆ ಕರೆ ಮಾಡಿ ಕಿರುಕುಳ ನೀಡಿದ್ದ.
ದೂರು ದಾಖಲಿಸಿಕೊಂಡು ಪರಿಶೀಲಿಸಿದಾಗ ಕರೆ ಮಾಡಿದ್ದು, ಗೋವಿಂದರಾಜು ಎಂಬಾತ ಎಂಬುದು ಪತ್ತೆಯಾಗಿದೆ. ಕೂಡಲೇ ಸಂಪಿಗೇಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
- ಸುರೇಶ್ ಬಾಬು ʼಪಬ್ಲಿಕ್ ನೆಕ್ಸ್ಟ್ʼ ಯಲಹಂಕ
PublicNext
10/07/2022 09:35 pm