ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಬ್, ಬಾರ್‌ಗಳ ಮೇಲೆ ಡೇ ಟೈಂನಲ್ಲೇ ಸಿಸಿಬಿ ದಾಳಿ- ಅಪ್ರಾಪ್ತರಿಗೆ ಮದ್ಯ ನೀಡಿದ್ದ ಪಬ್ ಮೇಲೆ ಕೇಸ್

ಬೆಂಗಳೂರು: ನಗರದ ಪ್ರತಿಷ್ಠಿತ ಪಬ್ ಮತ್ತು ಬಾರ್‌ಗಳ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶದ ಮೇಲೆ ಈ ದಾಳಿ ನಡೆದಿದ್ದು, ಮೊದಲ ಬಾರಿಗೆ ಹಗಲು ಹೊತ್ತಲ್ಲಿ ದಾಳಿ ನಡೆಸಿದ್ದು ವಿಶೇಷವಾಗಿತ್ತು.

ಕಾಲೇಜು ಮುಗಿಸಿ ಪಬ್‌ಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ‌ಬಂದಿತ್ತು. ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿರುವ ಹಿನ್ನೆಲೆ ಕಾಲೇಜು ಸಮೀಪವಿರುವ ಪಬ್‌ಗಳ ಮೇಲೆ ದಾಳಿ ನಡೆಸಲಾಗಿದ್ದು, ಕೋರಮಂಗಲದ ಬಾಂಬೆ ಅಡ್ಡ, ಟಾಕೋ ಸೇರಿ ಹಲವು ಪಬ್‌ನಲ್ಲಿ ತಲಾಶ್ ನಡೆಸಿದ್ದಾರೆ. ಈ ವೇಳೆ ಎಲ್ಲಾ ಪಬ್‌ಗಳು ಖಾಲಿ ಖಾಲಿಯಾಗಿದ್ದವು. ರೂಲ್ಸ್ ಫಾಲೋ ಮಾಡಿ ಅಂತ ಪಬ್ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಇನ್ನೂ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುತ್ತಿದ್ದ ಸಂಜಯನಗರದ ಪಬ್ ಒಂದರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

25/06/2022 08:50 am

Cinque Terre

1.86 K

Cinque Terre

0

ಸಂಬಂಧಿತ ಸುದ್ದಿ