ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ ಕದ್ದು ಪರಾರಿಯಾಗುತ್ತಿದ್ದ ಸರಗಳ್ಳರು: ಒಬ್ಬ ಸಿಕ್ಕಿಬಿದ್ದ, ಮತ್ತೊಬ್ಬ ಎಡವಿ ಬಿದ್ದ

ದೊಡ್ಡಬಳ್ಳಾಪುರ: ಚಿನ್ನದ ಸರ ಪಾಲಿಷ್ ಕೊಡುವ ನೆಪದಲ್ಲಿ ಗ್ರಾಮಕ್ಕೆ ಬಂದ ಸರಗಳ್ಳರು, ಮಹಿಳೆಯಿಂದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಈ ವೇಳೆ ಒಬ್ಬ ಕಳ್ಳನನ್ನ ಜನರೇ ಹಿಡಿದು ಗೂಸಾ ಕೊಟ್ಟಿದ್ದಾರೆ. ಮತ್ತೊಬ್ಬ ಕಳ್ಳ ಬೈಕ್‌ನಲ್ಲಿ ಪರಾರಿಯಾಗುವ ಗ್ರಾಮದ ಬೋರ್ಡ್‌ಗೆ ಡಿಕ್ಕಿ ಹೊಡೆದು ತಾನಾಗೇ ಸಿಕ್ಕಿಬಿದ್ದಿದ್ದಾನೆ.

ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದೆ. ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರು ಕಳ್ಳತನಕ್ಕೆ ಹೊಂಚಾಕುತ್ತಿದ್ದರು. ಇದೇ ಸಮಯದಲ್ಲಿ ಭಾಗ್ಯಶ್ರೀ ಎಂಬ ಮಹಿಳೆ ಮನೆ ಮುಂದೆ ನಿಂತಿದ್ದಾಗ, ಚಿನ್ನದ ಸರ ಪಾಲಿಶ್ ಮಾಡುವ ನೆಪದಲ್ಲಿ ಮಹಿಳೆಯನ್ನ ಮಾತನಾಡಿಸಿದ್ದಾರೆ. ಸರಗಳ್ಳರ ಮಾತಿಗೆ ಮರುಳಾದ ಆಕೆ ಪಾಲಿಷ್‌ಗಾಗಿ ತನ್ನ ಮಾಂಗಲ್ಯ ಸರ ಕೊಟ್ಟಿದ್ದಾಳೆ. ತಕ್ಷಣವೇ ಅವರು ಅಲ್ಲಿಂದ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾರೆ. ಈ ವೇಲೆ ಓರ್ವನನ್ನು ಹಿಡಿದ ಗ್ರಾಮಸ್ಥರು ಸರಿಯಾಗಿ ಗೂಸಾ ನೀಡಿದ್ದಾರೆ.

ಈ ವೇಳೆ ಸ್ಥಳದಿಂದ ಪರಾರಿಯಾಗುತ್ತಿದ್ದ ಮತ್ತೋರ್ವ, ಕೊನಘಟ್ಟ ಗ್ರಾಮದಲ್ಲಿ ವೃತ್ತದಲ್ಲಿ ಅಳವಡಿಸಿದ್ದ ಗ್ರಾಮದ ಹೆಸರಿನ ಬೋರ್ಡ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್‌ನಿಂದ ಬಿದ್ದಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ಸರಗಳ್ಳನನ್ನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದಾರೆ.

ಬಂಧಿತ ಆರೋಪಿಗಳುರ ಬಿಹಾರ ಮೂಲದವರಾಗಿದ್ದು, ತೆಲುಗು ಭಾಷೆ ಮಾತನಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nagesh Gaonkar
PublicNext

PublicNext

23/06/2022 10:50 pm

Cinque Terre

54.88 K

Cinque Terre

0

ಸಂಬಂಧಿತ ಸುದ್ದಿ