ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಲೈಟರ್ ವಿಚಾರಕ್ಕೆ ಲಾಂಗ್ ಬೀಸಿದ್ದ ಪುಂಡನ ಬಂಧನ!

ಬೆಂಗಳೂರು: ಬಾರ್ ನಲ್ಲಿ ಲೈಟರ್ ವಿಚಾರಕ್ಕೆ ಶುರುವಾದ ಗಲಾಟೆಗೆ ಲಾಂಗ್ ಬೀಸಿದ್ದ ಪುಂಡನನ್ನ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಮಹಾದೇವಸ್ವಾಮಿ @ ಕಡ್ಲೆ ಬಂಧಿತ ಆರೋಪಿಯಾಗಿದ್ದು, ಜೂನ್ 5ರಂದು ರಾತ್ರಿ ಬಸವೇಶ್ವರ ನಗರದ ನವ್ಯಾ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಕುಳಿತು ಕುಡಿಯುತ್ತಿದ್ದ. ಜನಾರ್ಧನ್ ಎಂಬಾತ ಸಿಗರೇಟ್ ಲೈಟರ್ ಪಡೆದಿದ್ದ‌. ಆದರೆ ಎಣ್ಣೆ ನಶೆಯಲ್ಲಿ‌ದ್ದ ಜನಾರ್ಧನ್ ಲೈಟರ್ ವಾಪಾಸ್ ಕೊಡಲ್ಲ ಎಂದಾಗ ಇಬ್ಬರ ನಡುವೆ ಬಾರಿನಲ್ಲಿ ಕಿರಿಕ್ ಆಗಿತ್ತು.

ಗಲಾಟೆಯಾಗುತ್ತಿರುವುದನ್ನ ಗಮನಿಸಿದ ಅಕ್ಕಪಕ್ಕದ ಅಂಗಡಿಯವರು ಲೈಟರ್ ವಿಚಾರಕ್ಕೆ ಯಾಕೆ ಗಲಾಟೆ ಮಾಡಿಕೊಳ್ತಿದ್ದೀರಿ ಎಂದು ಬೈದು ಬುದ್ಧಿವಾದ ಹೇಳಿ ಕಳಿಸಿದ್ದರು. ಆದರೆ ಸ್ವಲ್ಪ ಸಮಯದಲ್ಲೇ ಲಾಂಗ್ ಸಮೇತ ವಾಪಾಸಾಗಿದ್ದ ಮಹಾದೇವ, ಬಾರ್ ಒಳಗೆ ನುಗ್ಗಿ‌ ಜನಾರ್ಧನ್ ಮೇಲೆ ಲಾಂಗ್ ಬೀಸಿದ್ದ.

ಪರಿಣಾಮ ಜನಾರ್ಧನ್ ತಲೆಗೆ ಗಾಯಗಳಾಗಿತ್ತು. ಜನಾರ್ಧನ್ ಜೊತೆಗಿದ್ದ ಸ್ನೇಹಿತ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರ ನಗರ ಠಾಣಾ ಪೊಲೀಸರು ಸದ್ಯ ಆರೋಪಿ ಮಹಾದೇವಸ್ವಾಮಿ @ ಕಡ್ಲೆಯನ್ನ ಬಂಧಿಸಿ‌ ಜೈಲಿಗಟ್ಟಿದ್ದಾರೆ.

Edited By : Shivu K
PublicNext

PublicNext

18/06/2022 02:48 pm

Cinque Terre

44.11 K

Cinque Terre

0

ಸಂಬಂಧಿತ ಸುದ್ದಿ