ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಲಿಂಗಕಾಮಿಗಳ ಸಂಬಂಧ ಕೊಲೆಯಲ್ಲಿ ಅಂತ್ಯ!

ಬೆಂಗಳೂರು: ಲೈಂಗಿಕ ವಿಚಾರಕ್ಕಾಗಿ ಸಲಿಂಗಕಾಮಿ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ಆರೋಪಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದು, ಮೂಡಲಪಾಳ್ಯ ನಿವಾಸಿ ರಕ್ಷಿತ್ ಗೌಡ ಬಂಧಿತ ಆರೋಪಿಯಾಗಿದ್ದಾನೆ. ಮಡಿವಾಳದ ಕ್ಯಾಷಿಯರ್ ಲೇಔಟ್ ನಲ್ಲಿ ವಾಸವಾಗಿದ್ದ ಪ್ರದೀಪ್ ಕೊಲೆಯಾದ ದುರ್ದೈವಿಯಾಗಿದ್ದು ಕಳೆದ ತಿಂಗಳು ಪ್ರದೀಪ್ ನನ್ನ‌ ಆತನ ಮನೆಯಲ್ಲಿ ಕೊಂದು ಬೀಗ ಹಾಕಿ ಆರೋಪಿ ಎಸ್ಕೇಪ್ ಆಗಿದ್ದ. ನಾಲ್ಕು ದಿನಗಳ ಬಳಿಕ ಮನೆಯಲ್ಲಿ ಕೊಳೆತ ಶವದ ವಾಸನೆ ಬರುತ್ತಿದ್ದರಿಂದ ನೆರೆಹೊರೆ ಮನೆಯವರು ಅನುಮಾನಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದು ಮನೆ ಬೀಗ ಒಡೆದು ಒಳ ಹೋದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿತ್ತು.‌ ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಕೃತ್ಯದ ಹಿಂದೆ ರಕ್ಷಿತ್ ಭಾಗಿಯಾಗಿರುವುದು ಕಂಡು ಬಂದಿದ್ದರ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಸೆಕ್ಸ್ ವಿಚಾರಕ್ಕಾಗಿ ಪ್ರದೀಪ್ ನನ್ನ ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರದೀಪ್ ಪುರುಷನಾದರೂ ಮಹಿಳೆಯ ರೀತಿಯಲ್ಲಿ ವೇಷಭೂಷಣ ಧರಿಸಿ ಸಲಿಂಗ ಕಾಮಿಯಂತೆ ವರ್ತಿಸುತ್ತಿದ್ದ. ಇನ್ನೂ ಇವನ ವೇಷ ಭೂಷಣ ನೋಡಿ ಸ್ಥಳೀಯರೆಲ್ಲರೂ ಈತನನ್ನ ಹೆಂಗಸು ಎಂದೇ ಭಾವಿಸಿದ್ದರು.

ಕ್ಯಾಷಿಯರ್ ಲೇಔಟ್ ನಲ್ಲಿ‌ ಬಾಡಿಗೆ ಮನೆಯಲ್ಲಿ ಒಬ್ಬಂಟಿನಾಗಿ ವಾಸವಾಗಿದ್ದ ಪ್ರದೀಪ್ ಜೀವನಕ್ಕಾಗಿ‌ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.‌ ಪುರುಷರೊಂದಿಗೆ ಸಂಬಂಧದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಪ್ರದೀಪ್ ಮನೆಗೆ ಆಟೋ ಚಾಲಕನಾಗಿದ್ದ ಆರೋಪಿ ರಕ್ಷಿತ್, ಪ್ರದೀಪ್ ಮನೆಗೆ ಎರಡು ಮೂರು ಸಲ ಬಂದು ಹೋಗಿದ್ನಂತೆ. ಇಬ್ಬರೂ ದೈಹಿಕ‌ ಸಂಬಂಧ ಹೊಂದಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ. ಮೊದಮೊದಲು ಪ್ರದೀಪ್ ನನ್ನು ತೃತಿಯಲಿಂಗಿ ಎಂದು ಭಾವಿಸಿದ್ದ ಆರೋಪಿ ತದನಂತರ ವಿಷಯ ಗೊತ್ತಾದರೂ ವಿರೋಧ ವ್ಯಕ್ತಪಡಿಸಲಿರಲಿಲ್ಲ.

ಕಳೆದ ತಿಂಗಳು 28 ರಂದು ಆರೋಪಿ ರಕ್ಷಿತ್ ಮನೆಗೆ ಬಂದಿದ್ದು, ಕುಡಿದ ಆಮಲಿನಲ್ಲಿ ಸೆಕ್ಸ್ ಮಾಡುವಾಗ ಉಂಟಾದ ಕಲಹದಲ್ಲಿ ಇಬ್ಬರು ಜಗಳ‌ ಮಾಡಿಕೊಂಡಿದ್ದಾರೆ‌. ಮೊದಲು ಚಾಕುವಿನಿಂದ‌ ಪ್ರದೀಪ್ ಆರೋಪಿ ಮೇಲೆ ಹಲ್ಲೆ ಮಾಡಿದ್ದಾನೆ.‌ ಪ್ರತಿರೋಧವಾಗಿ ಅದೇ ಚಾಕುವಿನಿಂದ ಪ್ರದೀಪ್ ಹೊಟ್ಟೆಗೆ ರಕ್ಷಿತ್ ತಿವಿದು ಹತ್ಯೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದ. ನಾಲ್ಕೈದು ದಿನಗಳ‌ ಬಳಿಕ ಕೊಳೆತ ಶವ ವಾಸನೆ ಬಂದಿದ್ದರಿಂದ ಪೊಲೀಸರು ಸ್ಥಳಕ್ಕೆ ಧಾವಿಸಿ‌ದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ‌. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು‌ ಪೊಲೀಸರು ತಿಳಿಸಿದ್ದಾರೆ‌.

Edited By : Manjunath H D
PublicNext

PublicNext

10/06/2022 04:12 pm

Cinque Terre

25.66 K

Cinque Terre

0

ಸಂಬಂಧಿತ ಸುದ್ದಿ