ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೋಜು ಮಸ್ತಿ ಮಾಡಲು ಚಾಕು ತೋರಿಸಿ ನಂದಿಬೆಟ್ಟದಲ್ಲಿ ರೈತನ ಸುಲಿಗೆ

ದೊಡ್ಡಬಳ್ಳಾಪುರ : ಬೈಕ್‌ಗೆ 100 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ನಂದಿಬೆಟ್ಟ ನೋಡಲು ಪುಂಡರ ಗ್ಯಾಂಗ್ ಬಂದಿರುತ್ತೆ. ಆದರೆ ನಂದಿಬೆಟ್ಟ ಒಳ ಹೋಗಲು ಪ್ರವೇಶ ಶುಲ್ಕಕ್ಕೂ ಅವರಲ್ಲಿ ದುಡ್ಡಿರಲಿಲ್ಲ. ಹಣಕ್ಕಾಗಿ ಸಂಚು ನಡೆಸಿದ ಪುಂಡರು ರೈತನನ್ನು ಅಡ್ಡಗಟ್ಟಿ ಚಾಕು ತೋರಿಸಿ 25 ಸಾವಿರ ನಗದು ಒಂದು ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗಿದ್ದರು. ಕಾರ್ಯಚರಣೆ ನಡೆಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಬೆಂಗಳೂರು ಯುವಕರಿಗೆ ಬೈಕ್ ಕ್ರೇಜ್ ಜೋರು, ಕೈಗೆ ಬೈಕ್ ಸಿಕ್ಕರೆ ಸಾಕು ಜಾಲಿ ರೈಡ್ ಮಾಡ್ತಾರೆ. ಅದರಲ್ಲೂ ನಂದಿಬೆಟ್ಟ ಜಾಲಿ ರೈಡಡ್‌ಗೆ ಹೇಳಿ ಮಾಡಿಸಿದ ತಾಣ. ಪೆಟ್ರೋಲ್‌ಗೆ ನೂರು ರೂಪಾಯಿ ಸಿಕ್ಕರೆ ಸಾಕು. ನಂದಿಬೆಟ್ಟಕ್ಕೆ ಸವಾರಿ ಹೊರಟೆ ಬಿಡುಡ್ತಾರೆ. ಬೆಂಗಳೂರಿನ ಗೋವಿಂದಪುರದ ಸೈಯದ್ ಸಲೀಂ ಮತ್ತು ಸೈಯದ್ ಅಬೀಬ್ ಉಲ್ಲಾ ಸಹ ಬೈಕ್ಗೆ 100 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಖಾಲಿ ಜೇಬಲ್ಲಿ ನಂದಿಬೆಟ್ಟಕ್ಕೆ ಬಂದಿದ್ರು. ಆದ್ರೆ ಅವರ ಬಳಿ ಪ್ರವೇಶ ಶುಲ್ಕಕ್ಕೂ ಕಾಸಿರಲಿಲ್ಲ. ಹಣಕ್ಕಾಗಿ ಸಂಚು ನಡೆಸಿದ ಅವರು ರೈತನ ಸುಲಿಗೆ ಮಾಡಿ 25 ಸಾವಿರ ನಗದು ಮತ್ತು ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದರು. ಸುಲಿಗೆ ಮಾಡಿದ ಹಣದಲ್ಲಿ ನಂದಿಬೆಟ್ಟಕ್ಕೆ ಹೋದ ಇವರು ಸ್ನೇಹಿತರ ಜೊತೆಯಲ್ಲಿ ಮೋಜು ಮಸ್ತಿ ಮಾಡಿದ್ರು.

ದೊಡ್ಡಬಳ್ಳಾಪುರ ತಾಲೂಕಿನ ಮೇಳೆಕೋಟೆ ರೈತ ರಾಜಣ್ಣ ಬೀನ್ಸ್ ಬೆಳೆಯುತ್ತಿದ್ದರು. ಏಪ್ರಿಲ್ 29ರಂದು ಮುಂಜಾನೆ ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೀನ್ಸ್ ಮಾರಾಟ ಮಾಡಿ ವಾಪಸ್ ಬರುತ್ತಿದ್ದರು. ಇವರನ್ನೇ ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಸೈಯದ್ ಸಲೀಂ ಮತ್ತು ಸೈಯದ್ ಅಬೀಬ್ ಉಲ್ಲಾ ಬಂದಿದ್ರು. ಅಡ್ರೆಸ್ ಕೇಳುವ ನೆಪದಲ್ಲಿ ರಾಜಣ್ಣರವರನ್ನ ನಿಲ್ಲಿಸಿದ ಖತರ್ನಾಕ್ ಗಳು ಚಾಕು ತೋರಿಸಿ 25,200 ರೂಪಾಯಿ ನಗದು, ಮೊಬೈಲ್ ಕದ್ದು ಪರಾರಿಯಾಗಿದ್ದರು.

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದ ತಂಡ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಕಾರ್ಯಚರಣೆಗೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನಾ ವಂಶಿಕೃಷ್ಣ ಶ್ಲಾಘಿಸಿದ್ದಾರೆ.

Edited By : Nagesh Gaonkar
PublicNext

PublicNext

07/06/2022 10:14 pm

Cinque Terre

38.32 K

Cinque Terre

3

ಸಂಬಂಧಿತ ಸುದ್ದಿ