ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಸ್ತೆ ಮೇಲೆ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿದ ಚಾಲಕ

ಬೆಂಗಳೂರು: ಮೂಕ ಪ್ರಾಣಿಗಳೂ ಕೂಡಾ ನಮ್ಮಂತೆ ಜೀವಿ ಅನ್ನೋದನ್ನ ಮರೆತು ಬಹಳಷ್ಟು ಜನ ವಿಕೃತಿ ಮೆರೆದಿರೋ ಉದಾಹರಣೆಗಳು ಸಾಕಷ್ಟಿವೆ. ಅದಕ್ಕೆ ಹೊಸ ಸೇರ್ಪಡೆ ಈ ಘಟನೆ.

ಹೌದು ರಸ್ತೆಯಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿ ಚಾಲಕ ವಿಕೃತಿ ಮೆರೆದ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಕಾರಿನಡಿ ಸಿಲುಕಿದ ನಾಯಿ ಒದ್ದಾಡಿದ ದೃಶ್ಯ ನಿಜಕ್ಕೂ ಮನಕಲಕುವಂತಿದೆ. ನೋವಿನಿಂದ ಒದ್ದಾಡಿ ಕೊನೆಗೆ ನಾಯಿ ಪ್ರಾಣ ಬಿಟ್ಟಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ ಕೂಡಾ ಹಿಂತಿರುಗಿ ನೋಡಲಿಲ್ಲ.. ಅತ್ತ ನಾಯಿ ಒದ್ದಾಡ್ತಾ ಇದ್ರೂ ಅದನ್ನ ಕಂಡ ಜನ ಕೂಡಾ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದದ್ದು ನಿಜಕ್ಕೂ ಅಮಾನವೀಯತೆಗೆ ಸಾಕ್ಷಿಯಾಗುವಂತಿತ್ತು.

Edited By : Manjunath H D
PublicNext

PublicNext

30/05/2022 12:00 pm

Cinque Terre

27.18 K

Cinque Terre

0

ಸಂಬಂಧಿತ ಸುದ್ದಿ