ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೊಬೈಲ್ ಫೋನ್‌ ನೋಡಬೇಡ ಎಂದಿದ್ದಕ್ಕೆ ಯುವತಿ ನೇಣಿಗೆ ಶರಣು

ದೊಡ್ಡಬಳ್ಳಾಪುರ: ಮನೆಯಲ್ಲಿ ಇದ್ದದ್ದು ಒಂದೇ ಮೊಬೈಲ್, ಕುಟುಂಬ ಸದಸ್ಯರೆಲ್ಲರೂ ಇದೇ ಮೊಬೈಲ್ ಬಳಸ್ತಾ ಇದ್ರು. ಚಾರ್ಚಿಂಗ್ ಹಾಕಿದ ಮೊಬೈಲ್ ನೋಡುತ್ತಿದ್ದ ಮಗಳನ್ನ ಮೊಬೈಲ್ ನೋಡಬೇಡ ಅಂದಿದಕ್ಕೆ ನೇಣಿಗೆ ಶರಣಾಗಿದ್ದಾಳೆ.

ದೊಡ್ಡಬಳ್ಳಾಪುರ ನಗರ ಹೊರವಲಯ ಮಾದಗೊಂಡನಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿದ್ದು, ದೊಡ್ಡಬಳ್ಳಾಪುರ ನಗರ ರಾಜೀವ್ ಗಾಂಧಿ ಬಡಾವಣೆಯ ನಿವಾಸಿ 19 ವರ್ಷದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನರಸಪ್ಪ ಮತ್ತು ಜಯಲಕ್ಷ್ಮಮ್ಮ ದಂಪತಿಗೆ ಮೂವರು ಮಕ್ಕಳು, ಮೃತ ಜಯಲಕ್ಷ್ಮಿ ಎರಡನೇ ಮಗಳು, ಸ್ವಭಾವದಲ್ಲಿ ಮುಂಗೊಪಿಯಾಗಿದ್ದ ಜಯಲಕ್ಷ್ಮಿ ಬುದ್ಧಿ ಮಾತು ಹೇಳಿದ್ರೆ ಕೇಳುವ ಜಯಮಾನದವಳಲ್ಲ.

ಹಿರಿಯ ಮಗಳಿಗೆ ಮದುವೆ ಫಿಕ್ಸ್ ಆಗಿದ್ದು, ಭಾನುವಾರ ಮಧ್ಯಾಹ್ನದ ಸಮಯಕ್ಕೆ ಮದುವೆ ಖರ್ಚಿಗೆ ಹಣ ಕೊಡುವರು ಫೋನ್ ಮಾಡುವರಿದ್ದರು. ಕರೆ ಸ್ವೀಕರಿಸಲು ಮೊಬೈಲ್ ಚಾರ್ಚಿಂಗ್ ಹಾಕಿದ್ರು. ಚಾರ್ಚಿಂಗ್ ಹಾಕಿದ್ದ ಮೊಬೈಲ್ ಅನ್ನು ಜಯಲಕ್ಷ್ಮಿ ನೋಡುತ್ತಿದ್ದಳು. ಹಣ ಕೊಡುವವರ ಕರೆಯ ನಿರೀಕ್ಷೆಯಲ್ಲಿದ್ದ ನರಸಪ್ಪ ಇದೇ ಸಮಯದಲ್ಲಿ ಮಗಳು ಮೊಬೈಲ್ ನೋಡುತ್ತಿರೋದನ್ನು ಕಂಡು ಕೋಪಗೊಂಡಿದ್ದಾರೆ. ಆಗ ಮೊಬೈಲ್ ಫೋನ್ ನೋಡಬೇಡ ಎಂದು ಮಗಳ ಮೇಲೆ ಗದರಿದ್ದಾರೆ. ಇದರಿಂದ ಕೋಪಗೊಂಡ ಜಯಲಕ್ಷ್ಮಿ ಮೊಬೈಲ್ ಹೊಡೆದಾಕಿ ಮನೆಗೆ ಚಿಲಕ ಹಾಕಿ ಹೊರಗೆ ಹೋಗಿದ್ದಾಳೆ. ಇತ್ತ ಪೋಷಕರು ಮಧ್ಯಾಹ್ನದಿಂದ ಇಡೀ ರಾತ್ರಿ ಜಯಲಕ್ಷ್ಮಿಗಾಗಿ ಹುಡುಕಾಡಿದ್ದಾರೆ. ಆದರೆ ಆಕೆಯ ಪತ್ತೆಯೇ ಆಗಿಲ್ಲ. ಸಂಬಂಧಿಕರ ಮನೆಗೆ ಹೋಗಿರಬೇಕು ಎಂಬ ನಂಬಿಕೆಯ ಮೇಲೆ ಸುಮ್ಮನಾಗಿದ್ದಾರೆ.

ಬೆಳಗ್ಗೆದ್ದ ತಕ್ಷಣವೇ ಮಗಳ ಸಾವಿನ ಸುದ್ದಿ ಮನೆಯ ಬಾಗಿಲಿಗೆ ಬಂದೆರಗಿದೆ. ಮಾದಗೊಂಡನಹಳ್ಳಿಯ ನಿರ್ಜನ ಪ್ರದೇಶದ ಜಾಲಿಯ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಜಯಲಕ್ಷ್ಮಿಯ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಯಲಕ್ಷ್ಮಿಯ ಸಾವು ಅನುಮಾನಸ್ಪದವಾಗಿದ್ದು, ಮರಕ್ಕೆ ಹತ್ತಿ ಎತ್ತರದ ಸ್ಥಳದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಳಾ ಎಂಬ ಸಂಶಯ ಸಹ ಇದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹದ ಶವ ಪರೀಕ್ಷೆಯ ನಂತರ ಆಕೆಯ ಸಾವಿನ ಅಸಲಿ ಸತ್ಯ ಬಯಲಾಗಲಿದೆ. ಅಂದೇನೆ ಇರಲಿ ಕ್ಷಣಿಕ ಕೋಪ ಸಾವಿಗೂ ಕಾರಣವಾಗಲಿದೆ ಎಂಬ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿದೆ.

Edited By : Shivu K
Kshetra Samachara

Kshetra Samachara

16/05/2022 06:14 pm

Cinque Terre

5.3 K

Cinque Terre

0

ಸಂಬಂಧಿತ ಸುದ್ದಿ