ಬೆಂಗಳೂರು : ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡ್ತಿದ್ದ ಸೆಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು ಉತ್ತರ ಯಲಹಂಕ ತಾಲೂಕಿನ ಚಿಕ್ಕಜಾಲದಲ್ಲಿರುವ ಅಕ್ರಮ ಗ್ಯಾಸ್ ಫಿಲ್ಲಿಂಗ್ ಗೋಡನ್ ಇದಾಗಿದೆ.
ಇನ್ನು ಲಾಲ್ ಸಿಂಗ್ ಎಂಬಾತನ ಹೆಸರಿನಲ್ಲಿರುವ ಈ ಗ್ಯಾಸ್ ರೀಫಿಲ್ಲಿಂಗ್ ಗೋಡನ್ ಬಳಿ ಇಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಮಾಲೀಕ ಲಾಲ್ ಸಿಂಗ್ ಪರಾರಿಯಾಗಿದ್ದಾನೆ.
ಸದ್ಯ 100ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ದಾಳಿ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
-SureshBabu Public Next ಯಲಹಂಕ..
PublicNext
23/04/2022 11:25 am