ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ಬಾಳ: ಯ್ಯೂಟೂಬ್ ನೋಡಿ ಕಳ್ಳತನಕ್ಕೆ ಸ್ಕೆಚ್: ಕಿಟಕಿ ಮುರಿದು ಕನ್ನ ಹಾಕ್ತಿದ್ದವರು ಅರೆಸ್ಟ್

ಹೆಬ್ಬಾಳ : ಈ ಹತಾರಗಳನ್ನೆಲ್ಲಾ ನೋಡ್ತಿದ್ರೆ ಯಾವೂದೋ ಬಾಂಡ್ ಸಿನಿಮಾ ನೆನಪಾಗುತ್ತೆ. ಕಟರ್, ಬ್ಲೇಡ್, ಹಾರೆ ಇವನೆಲ್ಲ ಬ್ಯಾಗ್ ನಲ್ಲಿ ಹಾಕೊಂಡು ಸೇಮ್ ಬಾಂಡ್ ಸಿನಿಮಾ ರೀತಿ ಇವ್ರು ಎಂಟ್ರಿ‌ ಕೊಟ್ರೆ ಮನೆಯಲ್ಲಿ ಚಿನ್ನಾಭರಣ ದೋಚೋದು ಕನ್ಫರ್ಮ್.

ಎಸ್.. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಏಳು ಮನೆಗಳ ಕಳ್ಳತನ ನಡೆದಿತ್ತು. ಕಿಟಕಿ ಮುರಿದು ಕಳ್ಳರು ಕನ್ನ ಹಾಕಿದ್ರು. ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ಇಬ್ಬರು ಅಂತರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳತನ ಮಾಡಲು ಬೇಕಾದ ಸಲಕರಣೆಗಳನ್ನ ಯ್ಯೂಟೂಬ್ ನಲ್ಲಿ ನೋಡಿ ಮಾಹಿತಿ ಕಲೆ ಹಾಕ್ತಿದ್ರು. ನಂತರ ಕದ್ದ ಬೈಕಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ತೆಲಂಗಾಣ ಮೂಲದ ವಿನೋದ್ ಕುಮಾರ್ ಹಾಗೂ ಪಶ್ಚಿಮ ಬಂಗಾಳದ ರೋಹಿತ್ ಮಂಡಲ್ ನ ಇನ್ಸ್ಪೆಕ್ಟರ್ ಬಾಲ್ ರಾಜ್ ಅಂಡ್ ಟೀಂ‌ ಬಂಧಿಸಿದ್ದಾರೆ. ಈ‌ ಪೈಕಿ ಪ್ರಮುಖ ಆರೋಪಿ ವಿನೋದ್ ಹೈದರಾಬಾದ್ ನಿವಾಸಿಯಾಗಿದ್ದು 2015ರಲ್ಲಿ ಈತನ ವಿರುದ್ಧ ಆರು ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ ಬಂದಿದ್ದ. ಆದರೆ ಈತನನ್ನು ಮನೆಗೆ ಸೇರಿಸಿಕೊಂಡಿರಲಿಲ್ಲ. ಹೀಗಾಗಿ ಕೊಲ್ಕತ್ತಾಗೆ ಹೋಗಿ ಮೂರು ವರ್ಷಗಳ ಕಾಲ ವಾಸವಾಗಿದ್ದ. ಈ ವೇಳೆ ಬಾಂಗ್ಲಾ ಮೂಲದ ಯುವತಿ ಪರಿಚಯವಾಗಿ ಪ್ರೇಮಾಂಕುರವಾಗಿ ಮದುವೆ ಮಾಡಿಕೊಂಡಿದ್ದ. ಜೊತೆಗೆ ರೋಹಿತ್ ಮಂಡಲ್ ನ ಪರಿಚಯವಾಗಿತ್ತು. ಈ ಮೂವರು ಜೊತೆಗೊಡಿ ಹೆಸರು ಬದಲಾಯಿಸಿಕೊಂಡು ಬಾಂಗ್ಲಾದಲ್ಲೂ ವಾಸವಿದ್ರು. ಅಲ್ಲಿ ಜೀವನ ನಡೆಸಲು ಕಷ್ಟವಾಗಿದ್ದರಿಂದ ಮತ್ತೆ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ರು. ಕಳ್ಳತನ ಮಾಡಲು ಬೇಕಾದ ಸಲಕರಣೆಗಳನ್ನ ಯ್ಯೂಟೂಬ್ ನಲ್ಲಿ ನೋಡಿ ಖರೀದಿಸಿದ್ರು.

ಕೃತ್ಯ ಎಸಗಲು ನಗರದಲ್ಲಿ ಬೈಕ್ ಕದ್ದು ರಾತ್ರಿ ವೇಳೆ‌ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು‌. ಖದೀಮರ ಕೈಚಳಕ ಹೆಚ್ಚಾಗುತ್ತಿದ್ದಂತೆ ಗಂಭೀರವಾಗಿ ತೆಗೆದುಕೊಂಡ ಇನ್ ಸ್ಪೆಕ್ಟರ್ ಬಾಲರಾಜ್ ನೇತೃತ್ವದ ತಂಡ ಇಬ್ಬರು ಅಂತರಾಜ್ಯ ಖದೀಮರನ್ನು ಬಂಧಿಸಿ 79 ಲಕ್ಷ ಮೌಲ್ಯದ 792 ಗ್ರಾಂ‌ ಚಿನ್ನಾಭರಣ, ವಿವಿಧ ಕಂಪೆನಿಯ ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ‌.

Edited By : Shivu K
PublicNext

PublicNext

22/04/2022 10:15 pm

Cinque Terre

51.44 K

Cinque Terre

2

ಸಂಬಂಧಿತ ಸುದ್ದಿ