ಬೆಂಗಳೂರು: ಏ.9 ರಂದು ಲಾಂಗ್ ತೋರಿಸಿ ಭಯ ಸೃಷ್ಟಿಸಿ, ವ್ಯಕ್ತಿಯೊಬ್ಬನ ಮೇಲೆ ಲಾಂಗ್ ಬೀಸಿ ಎಸ್ಕೇಪ್ ಆಗಿದ್ದ ಆರೋಪಿಯೊಬ್ಬನನ್ನು ಇಂದು ಬೆಳಿಗ್ಗೆ ಪೊಲೀಸರು ಗುಂಡೇಟು ಕೊಟ್ಟು ಬಂಧಿಸಿದ್ದಾರೆ.
ಹೌದು ಲಾಂಗ್ ಹಿಡಿದು ಹವಾ ಮೆಟೈನ್ ಮಾಡಿದ್ದ ರೌಡಿ ಶೀಟರ್ ಶರಣಪ್ಪನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಳೆದ ಭಾನುವಾರ ಇದೇ ಶರಣಪ್ಪ ವಂಶಿ ಮತ್ತು ರಾಜ್ ಕುಮಾರ್ ಜೊತೆ ಸೇರಿ ಮರ್ಡರ್ ಅಟೆಮ್ಟ್ ಮಾಡಿದ್ರು.
ಈ ಕುರಿತು ಕೇಸ್ ದಾಖಲಿಸಿಕೊಂಡಿದ್ದ ಸಂಜಯನಗರ ಇನ್ಸ್ಪೆಕ್ಟರ್ ಬಾಲರಾಜ್ ಆ್ಯಂಡ್ ಟೀಂ ಆರೋಪಿಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ರು.
ಇಂದು ಬೆಳಿಗ್ಗೆ ರೌಡಿ ಶೀಟರ್ ಹೆಬ್ಬಾಳದ ಭೂಪಸಂದ್ರ ರೋಡ್ ನಲ್ಲಿ ಇರುವ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಬಾಲರಾಜ್ ಕ್ರೈಂ ಟೀಂ ಜೊತೆಗೆ ಸ್ಫಾಟ್ ಗೆ ಹೋಗಿದ್ರು.
ಶರಪ್ಪನನ್ನ ಹಿಡಿಯುವ ವೇಳೆ ಪಿಸಿ ಮಲ್ಲಪ್ಪ ಕೈಗೆ ಡ್ರಾಗರ್ ನಿಂದ ಇರಿದು ಎಸ್ಕೇಪ್ ಆಗಲು ಟ್ರೈ ಮಾಡಿದ್ದ. ಈ ವೇಳೆ ಇನ್ಸ್ಪೆಕ್ಟರ್ ಬಾಲರಾಜ್ ಏರ್ ಫೈರ್ ಮಾಡಿ ಸರಂಡರ್ ಆಗುವಂತೆ ಶರಣಪ್ಪಗೆ ವಾರ್ನ್ ಮಾಡಿದ್ದಾರೆ.
ಇದಕ್ಕೆ ಒಪ್ಪದ ರೌಡಿ ಶೀಟರ್ ಡ್ರಾಗರ್ ಹಿಡಿದು ಇನ್ಸ್ಪೆಕ್ಟರ್ ಗೆ ಚುಚ್ಚಲು ಮುಂದಾಗಿದ್ದಾನೆ. ಈ ವೇಳೆ ಇನ್ಸ್ಪೆಕ್ಟರ್ ಬಾಲರಾಜ್ ಸೆಲ್ಫ್ ಡಿಫೆನ್ಸ್ ಗಾಗಿ ಶರಣಪ್ಪನ ಕಾಲಿಗೆ ಗುಂಡುಹಾರಿಸಿ ಅರೆಸ್ಟ್ ಮಾಡಿದ್ದಾರೆ.
ಇನ್ನೂ ಗಾಯಾಳು ಆರೋಪಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು. ಘಟನೆಯಲ್ಲಿ ಗಾಯವಾಗಿದ್ದ ಕಾನ್ಸ್ ಟೆಬಲ್ ಮಲ್ಲಪ್ಪ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
13/04/2022 01:27 pm