ಬೆಂಗಳೂರು: ನಗರದಲ್ಲಿ ವೀಲಿಂಗ್ ಪುಂಡರ ಹಾವಳಿ ನಿಲ್ಲುತ್ತಿಲ್ಲ. ವೀಲಿಂಗ್ ಶೋಕಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ಪುಂಡರು ಬೈಕ್ ಹತ್ತಿಸಿದ್ದಾರೆ. ಘಟನೆಯಲ್ಲಿ ಮಹಿಳೆಯ ತಲೆ ಮತ್ತು ಬೆನ್ನಿಗೆ ಪೆಟ್ಟಾಗಿದೆ. ಜನ ಗಲಾಟೆ ಮಾಡುತ್ತಾರೆ ಎನ್ನುವ ಭಯಕ್ಕೆ ಬೈಕ್ ಸಮೇತ ಪುಂಡರು ಎಸ್ಕೇಪ್ ಆಗಿದ್ದಾರೆ. ಅದು ಗೋರಿಪಾಳ್ಯದ ನರಸಿಂಹ ಸ್ವಾಮಿ ದೇವಾಲಯ ಗಲ್ಲಿಯಲ್ಲಿ ಪುಂಡರು ಪುಂಡಾಟ ತೋರಿದ್ದಾರೆ. ಕಳೆದ ಬುಧವಾರ ಮಧ್ಯಾಹ್ನ ನಡೆದಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
PublicNext
09/04/2022 05:43 pm