ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಚಿಕನ್ ರೋಲ್‌ಗೆ ಆಸೆ ಬಿದ್ದು ಕೊಲೆಯಾದ ಯುವಕ

ಬೆಂಗಳೂರು: ಆತ ಈಗಷ್ಟೇ ಸರ್ಕಾರಿ ಕೆಲಸಕ್ಕೆ ಸೇರಿದ್ದ. ಹೆಸರು ಚಂದ್ರು. ತನ್ನ ಸ್ನೇಹಿತ ಸೈಮನ್ ಹುಟ್ಟು ಹಬ್ಬಕ್ಕೆ ಭರ್ಜರಿಯಾಗಿ ಕೇಕ್ ಕಟ್ ಮಾಡಿಸಿದ್ದ. ಕೇಕ್ ತಿಂದು ಚಿಕನ್ ರೋಲ್ ಬೇಕು ಅಂತ ಕೇಳಿದ್ದಕ್ಕೆ ಇಡೀ ಕಾಟನ್ ಪೇಟೆ ಸುತ್ತ ಮುತ್ತ ಹುಡುಕಿದ್ದರು. ಹೀಗೆ ಚಿಕನ್ ರೋಲ್ ಹುಡುಕುತ್ತ ಗೋರಿಪಾಳ್ಯದ ಕಡೆ ರಾತ್ರಿ 1 ಗಂಟೆ ಹೊತ್ತಿಗೆ ಬೈಕ್‌ನಲ್ಲಿ ಸ್ನೇಹಿತರಿಬ್ಬರು ಹೊರಟಿದ್ರು.

ಈ ವೇಳೆ ಜೆಜೆಆರ್ ನಗರ ಬಳಿ ಚಂದ್ರು ಗಾಡಿಗೂ ಆರೋಪಿ ಶಾಹಿದ್ ಗಾಡಿಗೂ ಜಸ್ಟ್ ಟಚ್ ಆಗಿತ್ತು. ತ್ರಿಬಲ್ ರೈಡ್ ಹೊರಟಿದ್ದ ಶಾಹಿದ್ ಮತ್ತು ಫ್ರೆಂಡ್ಸ್ ಇದೇ ವಿಚಾರಕ್ಕೆ ಕಿರಿಕ್ ತೆಗದು ಗಲಾಟೆ ಮಾಡಿದ್ದಾರೆ. ಗಲಾಟೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ

21 ವರ್ಷದ ಚಂದ್ರಶೇಖರ್ @ಚಂದ್ರುವಿಗೆ ಚಾಕೂವಿನಿಂದ ಇರಿದು ಕೊಲೆಮಾಡಿದ್ದಾರೆ. ಐಟಿಐ ವ್ಯಾಸಂಗ ಮಾಡಿದ್ದ ಚಂದ್ರು ರೈಲ್ವೇ ಇಲಾಖೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ.

ಸದ್ಯ ಕೊಲೆಗಡುಕರು ಎಸ್ಕೇಪ್ ಆಗಿದ್ದು ಚಂದ್ರು ಸ್ನೇಹಿತರು ನೀಡಿದ‌ ದೂರಿನ‌ ಮೇರೆಗೆ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Edited By :
PublicNext

PublicNext

05/04/2022 01:58 pm

Cinque Terre

35.71 K

Cinque Terre

2

ಸಂಬಂಧಿತ ಸುದ್ದಿ