ಬ್ಯಾಟರಾಯನಪುರ: ಬ್ಯಾಟರಾಯನಪುರ ಪೊಲೀಸರು ಮೋಸ್ಟ್ ವಾಂಟೆಡ್ ಗಾಂಜಾ ಪೆಡ್ಲರ್ ನನ್ನ ಅರೆಸ್ಟ್ ಮಾಡಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ಚಾಂದ್ ಪಾಷಾ ಹಾಗೂ ಮತ್ತಿಬ್ಬರು ಆರೋಪಿಗಳ ವಿರುದ್ಧ ಡ್ರಗ್ ಕೇಸ್ ದಾಖಲಾಗಿತ್ತು. ಹುಚ್ಚಪ್ಪ ಮೈದಾನದಲ್ಲಿ ಅಕ್ರಮವಾಗಿ ಗಾಂಜಾ ಮಾರ್ತಿದ್ದಾರೆಂಬ ಕಾರಣಕ್ಕೆ ದಾಳಿ ನಡೆಸಿದಾಗ ನಾಲ್ಕೂವರೆ ಕೆಜಿ ಗಾಂಜಾ ಸೀಜ್ ಆಗಿತ್ತು. ಈ ವೇಳೆ ಓರ್ವ ಆರೋಪಿ ಲಾಕ್ ಆಗಿ ಮತ್ತೊಬ್ಬ ಆರೋಪಿ ಚಾಂದ್ ಪಾಷಾ ಎಸ್ಕೇಪ್ ಆಗಿದ್ದ. ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಚಾಂದ್ ಪಾಷಾ ಮತ್ತೆ ಬ್ಯಾಟರಾಯನಪುರ ಪೊಲೀಸ್ರಿಗೆ ಸಿಕ್ಕಿಬಿದ್ದಿದ್ದು ಈ ವೇಳೆ ಐದೂವರೆ ಕೆಜಿ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಒರಿಸ್ಸಾದಿಂದ ಗಾಂಜಾವನ್ನ ತರಿಸಿ ಅದನ್ನ ಸಣ್ಣ ಸಣ್ಣ ಪ್ಯಾಕೆಟ್ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಸಾಕಷ್ಟು ಗಾಂಜಾ ವ್ಯಸನಿಗಳು ಈತನ ಗಿರಾಕಿಗಳೆಂದು ಹೇಳಿಕೊಂಡಿರೋ ಈತ ಮೋಸ್ಟ್ ವಾಂಟೆಂಡ್ ಪೆಡ್ಲರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
31/03/2022 05:06 pm