ಬೆಂಗಳೂರು: ಒಂಟಿ ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಚಿನ್ನ ದೋಚುವ ಲೇಡಿ ಗ್ಯಾಂಗ್ ಸಿಟಿಯಲ್ಲಿ ಆಕ್ಟೀವ್ ಆಗಿದೆ. ಮಸಾಜ್ ಮಾಡುವ ನೆಪದಲ್ಲಿ ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಚೈನ್ ಎಗರಿಸಿ ಮಹಿಳೆಯರು ಎಸ್ಕೇಪ್ ಆಗಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ಆರೋಪಿಗಳು ಚಿನ್ನ ಕದ್ದು ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾ.19ರಂದು ವೃದ್ಧೆ ಅಂಗಡಿಗೆ ಹೋಗಿ ಬರುತ್ತಿದ್ದ ವೇಳೆ ಲೇಡಿ ಗ್ಯಾಂಗ್ ವೃದ್ಧೆಯನ್ನ ಟಾರ್ಗೆಟ್ ಮಾಡಿದೆ. ಅಜ್ಜಿ ಬಳಿ ಹೋಗಿ ಕಾಲು ನೋವಿಗೆ ಮಸಾಜ್ ಮಾಡುತ್ತೇವೆ ಎಂದು ಮನೆಗೆ ಹೋಗಿ ಮಸಾಜ್ ಮಾಡುವ ನಾಟಕ ಆಡಿದ್ದರು. ಮಸಾಜ್ ಮಾಡುತ್ತಿದ್ದ ವೇಳೆ ಚೈನ್ ತೆಗೆದಿಡುವಂತೆ ಹೇಳಿದ್ದ ಮಹಿಳೆ ಕ್ಷಣಾರ್ಧದಲ್ಲಿ ಚೈನ್ ಕದ್ದು ಎಸ್ಕೇಪ್ ಆಗಿದ್ಳು. ಸದ್ಯ ಘಟನೆ ಕುರಿತು ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಲೇಡಿ ಗ್ಯಾಂಗ್‌ಗಾಗಿ ಬಲೆ ಬೀಸಿದ್ದಾರೆ.
Kshetra Samachara
28/03/2022 01:39 pm