ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತಂಗಿ ಲವರ್ ಜೊತೆ ಅಕ್ಕನ ಅನೈತಿಕ ಸಂಬಂಧ: ಅಡ್ಡಿಯಾದ ಗಂಡನನ್ನೇ ಕೊಲೆಗೈದ್ಲು

ತಂಗಿ ಲವರ್ ಜೊತೆ ಅಕ್ಕನ ಅನೈತಿಕ ಸಂಬಂಧ ಮುಂದುವರೆದಿತ್ತು. ಇದೇ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳ ಸಹ ನಡೆದಿತ್ತು. ರಾಜೀ ಪಂಚಾಯ್ತಿ ಮಾಡಿದ ಸಂಬಂಧಿಕರು ಗಂಡ ಹೆಂಡತಿಯನ್ನು ಒಂದು ಮಾಡಿದ್ರು. ಆದರೆ ಆ ರಾತ್ರಿ ಪ್ರಿಯಕರನ ಮನೆಗೆ ಕರೆಸಿದ ಆಕೆ ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ಲು.

ದೊಡ್ಡಬಳ್ಳಾಪುರ ತಾಲೂಕಿನ ಜಕ್ಕಸಂದ್ರ ಗ್ರಾಮದದಲ್ಲಿ ಮಾರ್ಚ್ 23ರ ಮಧ್ಯರಾತ್ರಿ 35 ವರ್ಷದ ಹನುಮಯ್ಯನನ್ನು ಹತ್ಯೆ ಮಾಡಲಾಗಿತ್ತು. ಹೆಂಡತಿ ಎ.ವಿ.ಭಾಗ್ಯಳೇ ಕೈ ಹಿಡಿದ ಗಂಡನ ತಲೆ ಮೇಲೆ ಕಲ್ಲು ಎತ್ತಾಕಿ ಭೀಕರವಾಗಿ ಕೊಲೆಮಾಡಿದ್ದಳು. ಬಳಿಕ ಇಡೀ ದಿನ ಗಂಡನ ಶವದ ಜೊತೆ ಇದ್ದಳು, ಮರುದಿನ ಬೆಳಗ್ಗೆ ಪಕ್ಕದ ಮನೆಯ ಹುಡುಗಿ ಸ್ನಾನಕ್ಕೆಂದು ಬಂದಾಗಲೇ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.

ಕೊಲೆಯಾದ ಹನುಮಯ್ಯ 14 ವರ್ಷದ ಹಿಂದೆ ಹೊಸಕೋಟೆ ತಾಲೂಕು ಅಟ್ಟೂರಿನ ಭಾಗ್ಯರನ್ನ ಮದುವೆಯಾಗಿದ್ದ. ಇವರ ದಾಂಪತ್ಯಕ್ಕೆ ಒಂದು ಗಂಡು ಒಂದು ಹೆಣ್ಣು ಮಗು ಇದೆ. ಮಕ್ಕಳಿಬ್ಬರು ಹಾಸ್ಟೇಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಗಂಡ ಹೆಂಡತಿ ಮಾತ್ರ ವಾಸವಾಗಿದ್ದರು. ಸಣ್ಣಪುಟ್ಟ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಹನುಮಯ್ಯ ಹೆಂಡತಿಯನ್ನ ಚೆನ್ನಾಗಿಯೇ ನೋಡಿಕೊಂಡಿದ್ದ. ಆದರೆ ಆತನ ಕುಡಿತ ಗಂಡ ಹೆಂಡತಿ ಜಗಳಕ್ಕೂ ಕಾರಣವಾಗಿತ್ತು. ಈ ಜಗಳ ನಡುವೆಯೇ ಭಾಗ್ಯ ಪರ ಪುರುಷನ ತೆಕ್ಕೆಗೆ ಜಾರಿದ್ಲು.

ತಂಗಿಯ ಲವರ್ ನಾಗೇಶ್ ಜೊತೆ ಭಾಗ್ಯಳ ಅಕ್ರಮ ಸಂಬಂಧದ ನಂಟು ಬೇಸೆದಿತ್ತು. ನಾಗೇಶ್ ಜೊತೆ ಚಕ್ಕಂದವಾಡಲು ಗಂಡನ ಮನೆ ಬಿಟ್ಟು ತವರು ಸೇರುತ್ತಿದ್ದಳು. ಪರಪುರುಷನ ಸಾಂಗತ್ಯ ಬಯಸಿದ್ದ ಹೆಂಡತಿ ಜೊತೆಗೆ ಗಂಡ ಜಗಳವಾಡುತ್ತಿದ್ದ. ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಹನುಮಯ್ಯನನ್ನ ಮುಗಿಸಲು ಸ್ಕೆಚ್ ಆಕಿಬಿಟ್ಟಿದ್ರು.

ಹನುಮಯ್ಯನ ಅಂತ್ಯ ಕಾಣಿಸಲು ಮಾರ್ಚ್ 23 ರಂದು ಭಾಗ್ಯಳ ಪ್ರಿಯಕರ ನಾಗೇಶ್ ಮತ್ತು ಆತನ ಸ್ನೇಹಿತ ನಾರಾಯಣಸ್ವಾಮಿ ಜಕ್ಕಸಂದ್ರ ಗ್ರಾಮಕ್ಕೆ ಬಂದಿದ್ದರು. ಮಧ್ಯರಾತ್ರಿ 2:30 ಸಮಯದಲ್ಲಿ ಮೂವರು ಸೇರಿ ಹನುಮಯ್ಯನ ಮೇಲೆ ಕಲ್ಲು ಎತ್ತಾಗಿ ಕೊಲೆ ಮಾಡತ್ತಾರೆ. ನಂತರ ಭಾಗ್ಯಳ ಮನೆಯಲ್ಲಿ ಬಿಟ್ಟು ನಾಗೇಶ್ ಮತ್ತು ನಾರಾಯಣಸ್ವಾಮಿ ಪರಾರಿಯಾಗಿದ್ರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯಾದ ಮೂರೇ ದಿನಕ್ಕೆ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

Edited By :
PublicNext

PublicNext

28/03/2022 11:54 am

Cinque Terre

43.26 K

Cinque Terre

7

ಸಂಬಂಧಿತ ಸುದ್ದಿ